ಬಟ್ಟೆ ಬದಲಾಯಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

ಸೋಮವಾರ, 26 ಏಪ್ರಿಲ್ 2021 (07:11 IST)
ಹೈದರಾಬಾದ್ : ಬಟ್ಟೆ ಬದಲಾಯಿಸಿಕೊಂಡು ಕಳ್ಳನೊಬ್ಬ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ಬಸ್ ಗಾಗಿ ಕಾಯುತ್ತಿದ್ದ ವ್ಯಕ್ತಿಯ ಸರ ಕಳ್ಳತನ ಮಾಡಿದ್ದಾನೆ. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ ಕಾರಣ ಪೊಲೀಸರು ಕಳ್ಳನ ಹುಡುಕಾಟದಲ್ಲಿ ತೊಡಗಿದ್ದಾಗ ಸಿಸಿಟಿವಿಯಲ್ಲಿ  ಆರೋಪಿ ಬಟ್ಟೆ ಬದಲಾಯಿಸಿಕೊಂಡು ಪರಾರಿಯಾಗುತ್ತಿರುವುದು ಕಂಡಬಂದಿದೆ.

ಹಾಗಾಗಿ ಜುಬಿಲಿ ಹಿಲ್ಸ್ ಪೊಲೀಸರು ತಂಡಗಳನ್ನು ರಚಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹಾಗೇ ವಿಚಾರಣೆಯ ವೇಳೆ ಈ ಹಿಂದೆ ಆತ ಇದೇ ರೀತಿಯಲ್ಲಿ ಆರು ಪ್ರಕರಣಗಳನ್ನು ಮಾಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ