ಹಾರ್ದಿಕ್ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಬುಧವಾರ, 25 ಅಕ್ಟೋಬರ್ 2017 (18:33 IST)
ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರುಹಾಜರಾದ ಹಿನ್ನೆಲೆಯಲ್ಲಿ ಪಟೇಲ್ ಮೀಸಲಾತಿ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ ಮತ್ತು ಲಾಲ್‌ಜಿ ಪಟೇಲ್‌ ಅವರಿಗೆ ಕೋರ್ಟ್, ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿದೆ.
ಮೂರು ವಿಚಾರಣೆಗಳಿಗೆ ಹಾಜರಾಗದ ಕಾರಣಕ್ಕಾಗಿ ವಾರಂಟ್ ನೀಡಲಾಗಿದೆ. ಜುಲೈ 2015 ರಲ್ಲಿ ಮೀಸಲಾತಿ ನೀಡುವಂತೆ  ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹಾರ್ದಿಕ್ ಪಟೇಲ್ ನೇತೃತ್ವದ ಗುಂಪು, ಬಿಜೆಪಿ ಶಾಸಕ ಋುಷಿಕೇಶ್ ಪಟೇಲ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಶಾಸಕ ಋುಷಿಕೇಶ್ ಪೊಲೀಸ್ ಠಾಣೆಯಲ್ಲಿ ಹಾರ್ದಿಕ್ ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 
 
ನಾನು ನಿಯಮಿತವಾಗಿ ವಿಚಾರಣೆಗೆ ಹಾಜರಾಗಿರುವೆ. ಕೆಲವು ಸಾಮಾಜಿಕ ಬದ್ಧತೆಯ ಕಾರಣದಿಂದ ನಾನು ಇಂದು ವಿಚಾರಣೆಗೆ ಹಾಜರಾಗಿರಲಿಲ್ಲ. ಒಂದು ವಿಚಾರಣೆಗೆ ಗೈರಾದಲ್ಲಿ ಬಂಧನ ವಾರೆಂಟ್ ಹೊರಡಿಸುವುದನ್ನು ಯಾರು ಕೇಳಿರಲಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಹಾರ್ದಿಕ್ ಪಟೇಲ್‌ಗೆ ಆತ್ಮಿಯರಾಗಿರುವ ದೈನೇಶ್ ಭಂಬಾನಿಯಾ ಮಾತನಾಡಿ, ಹಾರ್ದಿಕ್ ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.
 
ಗುಜರಾತ್ ರಾಜ್ಯದಲ್ಲಿ ಬಿಜೆಪಿ ಚುನಾವಣೆಯಲ್ಲಿ ಸೋಲಲಿದೆ ಎನ್ನುವುದು ಹಾರ್ದಿಕ್ ಪಟೇಲ್ ಬಂಧನ ವಾರೆಂಟ್‌ನಿಂದ ಖಟಿತವಾಗಿದೆ ಎಂದು ಪಟಿದಾರ್ ಅನಾಮತ್ ಅಂದೋಲನ್ ಸಮಿತಿ ಮುಖಂಡ ಅತುಲ್ ಪಟೇಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ