ಗುಜರಾತ್‌ನ್ನು ಅಭಿವೃದ್ಧಿ ಪಡಿಸಿದ್ರೆ ವಿಪಕ್ಷಗಳ ನಾಯಕರನ್ನು ಯಾಕೆ ಖರೀದಿಸುತ್ತಿದ್ದೀರಿ?: ಹಾರ್ದಿಕ್

ಸೋಮವಾರ, 23 ಅಕ್ಟೋಬರ್ 2017 (17:13 IST)
ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಲ್ಲಿ ಯಾಕೆ ವಿಪಕ್ಷಗಳ ಮುಖಂಡರನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೀರಾ ಎಂದು ಬಿಜೆಪಿ ವಿರುದ್ಧ ಪಟಿದಾರ್ ಅನಾಮತ್ ಅಂದೋಲನ್ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಖರೀದಿಸಲು ಬಿಜೆಪಿ 500 ಕೋಟಿ ರೂಪಾಯಿಗಳ ಬಜೆಟ್ ಸಿದ್ದಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
 
ಮತದಾರರನ್ನು ಪ್ರತಿಪಕ್ಷಗಳ ಮುಖಂಡರನ್ನು ಹಣ ನೀಡಿ ಖರೀದಿಸುತ್ತೇವೆ ಎನ್ನುವ ಭ್ರಮೆಯಲ್ಲಿರುವ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಗುಜರಾತ್ ಜನತೆಯನ್ನು ಬಿಜೆಪಿ ಖರೀದಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
 
ಗುಜರಾತ್ ಜನತೆ ಬಿಜೆಪಿಯ 22 ವರ್ಷಗಳ ಅಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.
 
ಗುಜರಾತ್ ರಾಜ್ಯದ ಜನತೆ ಖರೀದಿಸುವಷ್ಟು ಅಗ್ಗವಲ್ಲ. ಮತದಾರರನ್ನು ಖರೀದಿಸುವ ಮೂಲಕ ಬಿಜೆಪಿ ರಾಜ್ಯದ ಜನತೆಯನ್ನು ಅಪಮಾನ ಮಾಡುತ್ತಿದೆ. ಜನತೆ ತಮ್ಮ ಅಪಮಾನದ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಹಾರ್ದಿಕ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ