ದೆಹಲಿ ಅಬಕಾರಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಕಿಂಗ್ ಪಿನ್
ಅಬಕಾರಿ ಅಕ್ರಮ ಹಗರಣದಲ್ಲಿ ಕೇಜ್ರಿವಾಲ್ ರನ್ನು ಇಡಿ ಬಂಧಿಸಿದೆ. ಏಪ್ರಿಲ್ 15 ರವರೆಗೆ ಕೋರ್ಟ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿತ್ತು. ಈ ನಡುವೆ ಕೇಜ್ರಿವಾಲ್ ವಿಚಾರಣೆ ನಡೆಸಿರುವ ಇಡಿ ಹಲವು ವಿಚಾರಗಳನ್ನು ಕೋರ್ಟ್ ಗೆ ನೀಡಿದೆ.
ದೆಹಲಿ ಸಿಎಂ ಅಬಕಾರಿ ಹಗರಣದ ಪ್ರಮುಖ ರೂವಾರಿ. ಅವರು ಆರೋಪಿ ಎನ್ನುವುದಕ್ಕೆ ಹಲವು ದಾಖಲೆಗಳಿವೆ. ಕೇಜ್ರಿವಾಲ್ ಅಕ್ರಮ ಹಣ ವರ್ಗಾವಣೆ ಆರೋಪಿಯಾಗಿದ್ದಾರೆ ಎಂದು ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಗೆ ಉತ್ತರವಾಗಿ ಇಡಿ ಸುದೀರ್ಘ ವರದಿ ನೀಡಿದೆ.
ಇಂದು ದೆಹಲಿ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರು ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ವಿಚಾರಣೆ ನಡೆಸಲಿದ್ದಾರೆ. ಇದಕ್ಕೆ ಮೊದಲು ಇಡಿ ಕೋರ್ಟ್ ಗೆ ಸುದೀರ್ಘ ವರದಿ ನೀಡಿದೆ.