ಅಂದು ಸೋನಿಯಾ ಟೀಕಿಸಿದ್ದ ಕೇಜ್ರಿವಾಲ್, ಇಂದು ಸೋನಿಯಾ ಬಳಿಯೇ ಸಹಾಯ ಕೇಳಿದ ಸುನಿತಾ ಕೇಜ್ರಿವಾಲ್

Krishnaveni K

ಸೋಮವಾರ, 1 ಏಪ್ರಿಲ್ 2024 (11:28 IST)
ನವದೆಹಲಿ: ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದಿದ್ದ ಇಂಡಿಯಾ ಒಕ್ಕೂಟದ ಸಮಾವೇಶದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಒಟ್ಟಿಗೇ ಕೂತಿದ್ದು ಎಲ್ಲರ ಗಮನ ಸೆಳೆಯಿತು.

ಈ ಸಮಾವೇಶದಲ್ಲಿ ವೇದಿಕೆಗೆ ಬರುತ್ತಿದ್ದಂತೇ ಸೋನಿಯಾ ಗಾಂಧಿಯವರು ಸುನಿತಾ ಕೈ ಹಿಡಿದು ವಿಶ್ ಮಾಡಿದರು. ಬಳಿಕ ಇಬ್ಬರೂ ಆಪ್ತವಾಗಿ ಮಾತನಾಡುತ್ತಿದ್ದುದು ಕಂಡುಬಂತು. ಒಂದೆಡೆ ಕೇಜ್ರಿವಾಲ್ ಜೈಲಿನಲ್ಲಿದ್ದರೆ ಇತ್ತ ಸುನಿತಾ ಪತಿಯ ಸ್ಥಾನದಲ್ಲಿ ನಿಂತು ಇಂಡಿಯಾ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಇದನ್ನು ಗಮನಿಸಿದ ನೆಟ್ಟಿಗರು ಸುನಿತಾಗೆ ಹಳೆಯದನ್ನು ನೆನಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ರಾಜಕೀಯಕ್ಕೆ ಬಂದ ಸಂದರ್ಭದಲ್ಲಿ ಸೋನಿಯಾ ಗಾಂಧಿಯನ್ನು ಭ್ರಷ್ಟೆ ಎಂದು ಬಹಿರಂಗವಾಗಿ ಭಾಷಣ ಮಾಡಿದ್ದರು. ಅಂದಿನ ಆ ವಿಡಿಯೋ ತುಣುಕನ್ನು ನೆಟ್ಟಿಗರು ಇದೀಗ ವೈರಲ್ ಮಾಡಿದ್ದಾರೆ.

ಹಿಂದೆ ಭ್ರಷ್ಟೆ ಎಂದು ಜರೆದಿದ್ದ ಅದೇ ಸೋನಿಯಾ ಈಗ ಕೇಜ್ರಿವಾಲ್ ಗೆ ತಮ್ಮನ್ನು ಉಳಿಸಿಕೊಳ್ಳಲು ಬೇಕಾಯಿತು ಎಂದು ಲೇವಡಿ ಮಾಡಿದ್ದಾರೆ. ಹಿಂದೆ ಭ್ರಷ್ಟೆ, ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಭಾಷಣ ಮಾಡಿದ್ದ ಕೇಜ್ರಿವಾಲ್ ಇಂದು ತಮ್ಮನ್ನು ಜೈಲಿನಿಂದ ಬಿಡಿಸಿಕೊಳ್ಳಲು ಅವರ ಸಹಾಯವನ್ನೇ ಕೇಳುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ