ನವದೆಹಲಿ: ಅಬಕಾರಿ ಅಕ್ರಮದಲ್ಲಿ ಇಡಿಯಿಂದ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ನಡುವೆ ಕೇಜ್ರಿವಾಲ್ ಬಂಧನದಿಂದಾಗಿ ದೆಹಲಿಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ. ಸದ್ಯಕ್ಕೆ ಕೇಜ್ರಿವಾಲ್ ಎದುರು ಎರಡೇ ಆಯ್ಕೆಗಳಿವೆ. ಒಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಡಳಿತಕ್ಕೆ ಅನುವು ಮಾಡಿಕೊಡುವುದು. ಇಲ್ಲವೇ ಪತ್ನಿ ಸುನೀತಾರನ್ನು ಸಿಎಂ ಮಾಡುವುದು.
ಕೇಜ್ರಿವಾಲ್ ಈಗ ಎರಡನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹುತೇಕ ನಿಶ್ಚಿತ. ಹೀಗಾಗಿ ಒಂದೋ ಸುನಿತಾ ಕೇಜ್ರಿವಾಲ್ ಇಲ್ಲವೇ ಕೇಜ್ರಿವಾಲ್ ಆಪ್ತರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದು. ಲೋಕಸಭೆ ಚುನಾವಣೆ ಬೆನ್ನಲ್ಲೇ ಕೇಜ್ರಿವಾಲ್ ಅಧಿಕಾರ ಕಳೆದುಕೊಳ್ಳಲು ಖಂಡಿತಾ ಇಷ್ಟಪಡಲ್ಲ.
ಈಗಿನ ಬೆಳವಣಿಗೆ ಗಮನಿಸಿದರೆ ಸುನಿತಾ ಕೇಜ್ರಿವಾಲ್ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳಿವೆ. ಇಂದು ಆಪ್ ಸಚಿವರು ಸುನಿತಾರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಸದ್ಯದಲ್ಲಿಯೇ ಸುನಿತಾ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವ ಎಲ್ಲಾ ಲಕ್ಷಣಗಳಿವೆ.