ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಇರಬಹುದು, ತಿರುಪತಿಯಲ್ಲಿ ಹಿಂದೂಯೇತರರು ಇದ್ರೆ ತಪ್ಪಾ: ಒವೈಸಿ

Krishnaveni K

ಗುರುವಾರ, 6 ಫೆಬ್ರವರಿ 2025 (15:08 IST)
ಹೈದರಾಬಾದ್: ವಕ್ಫ್ ಮಂಡಳಿಯಲ್ಲಿ ಹಿಂದೂಯೇತರರು ಇರಬೇಕು ಎಂದು ಕಾನೂನು ತರುತ್ತಾರೆ, ಆದರೆ ತಿರುಪತಿಯಲ್ಲಿ ಹಿಂದೂಯೇತರರು ಇದ್ದರೆ ತಪ್ಪಾ ಎಂದು ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿದ್ದಾರೆ.

ಟಿಟಿಡಿಯಲ್ಲಿ ಹಿಂದೂಯೇತರ ಅಧಿಕಾರಿಗಳನ್ನು ಬೇರೆ ಇಲಾಖೆಗೆ ಎತ್ತಂಗಡಿ ಮಾಡಲಾಗಿದೆ. ಅನ್ಯಧರ್ಮದ ಒಟ್ಟು 18 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರ ಬಗ್ಗೆ ಈಗ ಅಸಾದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ವಕ್ಫ್  ಕಾಯಿದೆಗೆ ತಿದ್ದುಪಡಿ ಮಾಡಲು ಹೊರಟಿದೆ.  ಅದರ ಅನ್ವಯ ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಧರ್ಮದವರು ಇರಲೇಬೇಕು ಎಂದು ನಿಯಮ ಮಾಡುತ್ತಿದೆ. ಅದೇ ನಿಯಮ ಟಿಟಿಡಿಗೆ ಯಾಕೆ ಅನ್ವಯವಾಗಲ್ಲ ಎಂದು ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಕ್ಫ್ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸುತ್ತಾರೆ. ಅದೇ ಇಲ್ಲಿ ಟಿಟಿಡಿಯಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ ಎಂಬ ನಿಯಮ ಮಾಡುತ್ತಾರೆ ಎಂದು ಒವೈಸಿ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ