ಅಟಲ್ ಬಿಹಾರಿ ವಾಜಪೇಯಿಗೆ ಜನ್ಮದಿನದ ಸಂಭ್ರಮ; ಕೇಂದ್ರ ಸರ್ಕಾರ ಈ ದಿನವನ್ನು ಏನೆಂದು ಘೋಷಿಸಿದೆ ಗೊತ್ತಾ...?

ಸೋಮವಾರ, 25 ಡಿಸೆಂಬರ್ 2017 (13:03 IST)
ದೆಹಲಿ: ಇಂದು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಜನ್ಮದಿನದ ಶುಭಾಶಯ ತಿಳಿಸಿದರು.


ಪ್ರಧಾನಿ ಮೋದಿ ಅವರು ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇಂದು ಅವರು 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೇಂದ್ರ ಸರ್ಕಾರವು ಈ ದಿನವನ್ನು ‘ಗುಡ್ ಗವರ್ನನ್ಸ ಡೇ’ ಎಂದು ಘೋಷಿಸಿದೆ.


ಅಟಲ್ ಬಿಹಾರಿ ವಾಜಪೇಯಿ ಅವರು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿಡಿಸೆಂಬರ್ 25, 1924 ರಂದು ಜನಿಸಿದರು. ಇವರು 1996ರ ಸಾರ್ವತ್ರಿಕ ಚುನಾವಣೆಗಳ ನಂತರ ಭಾರತದ 10ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸತತ ಮೂರು ಬಾರಿ  ಭಾರತದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 2005ರಲ್ಲಿ ನಿವೃತ್ತಿ ಹೊಂದಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ