ತಾಂತ್ರಿಕ ದೋಷದ ಹಿನ್ನಲೆ; ಚಂದ್ರಯಾನ-2 ಉಡಾವಣೆ ರದ್ದು

ಸೋಮವಾರ, 15 ಜುಲೈ 2019 (10:09 IST)
ನವದೆಹಲಿ : ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೋಟ್ಯಾಂತರ ಜನರು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-2 ಉಡಾವಣೆಯನ್ನು ರದ್ದುಗೊಳಿಸಲಾಗಿದೆ.




ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸುವ ಉದ್ದೇಶದಿಂದ  ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿದೆ.


ಇದರ ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆಯಾಗಿತ್ತು.ತಕ್ಷಣ  ಉಡಾವಣೆಯನ್ನು  ರದ್ದುಗೊಳಿಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ