ಇಂದು 65 ನೇ ಕನ್ನಡ ರಾಜೋತ್ಸವದ ಹಿನ್ನೆಲೆ; ಕನ್ನಡಿಗರಿಗೆ ಕನ್ನಡದಲ್ಲಿ ಶುಭ ಹಾರೈಸಿದ ಪ್ರಧಾನಿ ಮೋದಿ

ಭಾನುವಾರ, 1 ನವೆಂಬರ್ 2020 (10:30 IST)
ಬೆಂಗಳೂರು : ಇಂದು 65 ನೇ ಕನ್ನಡ ರಾಜೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಕರ್ನಾಟಕದ ಜನತೆಗೆ ಪ್ರಧಾನಿ ಮೋದಿ ಕನ್ನಡದಲ್ಲಿಯೇ ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಟ್ವೀಟರ್ ನಲ್ಲಿ, ಕರ್ನಾಟಕದ ಸೋದರ, ಸೋದರಿಯರಿಗೆ ಶುಭಾಶಯ. ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಇದಕ್ಕೆ ಕನ್ನಡಿಗರ ಜನಶಕ್ತಿ, ಕೌಶಲ್ಯ ಕಾರಣ. ಕನ್ನಡಿಗರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಕನ್ನಡದಲ್ಲಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ