ದೇಶಾದ್ಯಂತ ಸದ್ದು ಮಾಡಿತ್ತು ಬ್ಯಾನ್‍ನೀಟ್!

ಸೋಮವಾರ, 21 ಮಾರ್ಚ್ 2022 (10:35 IST)
ರಾಜ್ಯದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಇರುವ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಗದ ಪರಿಣಾಮ ಉಕ್ರೇನ್ ನಂಹತ ದೇಶಗಳಿಗೆ ತೆರಳಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.

ಇದೀಗ ಉಕ್ರೇನ್-ರಷ್ಯಾ ಯುದ್ಧದಿಂದ ನಮ್ಮ ರಾಜ್ಯದ ನವೀನ್ ಅವರನ್ನು ಕಳೆದುಕೊಳ್ಳಬೇಕಾಯಿತು. ಇದೆಲ್ಲಕ್ಕೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀಟ್ ಪರೀಕ್ಷೆ ಕಾರಣವಾಗಿದೆ ಎಂದು ಹಲವರು ಆರೋಪಿಸಿ ಸೋಷಲ್ ಮೀಡಿಯಾಗಳಲ್ಲಿ ಬ್ಯಾನ್ನೀಟ್’ ಅಭಿಯಾನ ಆರಂಭಿಸಿದ್ದರು. 

ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್ನಲ್ಲಿ 1, ಆಂಧ್ರಪ್ರದೇಶದಲ್ಲಿ 31, ಅರುಣಾಚಲಂನಲ್ಲಿ 1, ಅಸ್ಸಾಂನಲ್ಲಿ 8, ಬಿಹಾರದಲ್ಲಿ 16, ಛಂಡೀಘರ್ನಲ್ಲಿ 1, ಛತ್ತಿಸ್ಘರ್ನಲ್ಲಿ 10, ದಾದ್ರಾ ನಗರಲ್ಲಿ 1, ದೆಹಲಿಯಲ್ಲಿ 10, ಗೋವಾದಲ್ಲಿ 1, ಗುಜರಾತ್ನಲ್ಲಿ 29, ಹರಿಯಾಣದಲ್ಲಿ 12, ಹಿಮಾಚಲ್ ಪ್ರದೇಶದಲ್ಲಿ 7, ಜಮ್ಮು ಮತ್ತು ಕಾಶ್ಮೀರದಲ್ಲಿ 8,

ಜಾಖರ್ಂಡ್ನಲ್ಲಿ 7, ಕರ್ನಾಟಕದಲ್ಲಿ 60, ಕೇರಳದಲ್ಲಿ 32, ಮಧ್ಯಪ್ರದೇಶದಲ್ಲಿ 22, ಮಹಾರಾಷ್ಟ್ರದಲ್ಲಿ 22, ಮಣಿಪುರದಲ್ಲಿ 2, ಮೇಘಾಲಯ- ಮಿಜೋರಾಂನಲ್ಲಿ ತಲಾ 1, ಒಡಿಶಾದಲ್ಲಿ 12, ಪುದುಚೆರಿನಲ್ಲಿ 9, ಪಂಜಾಬ್ನಲ್ಲಿ 10, ರಾಜಾಸ್ತಾನ್ನಲ್ಲಿ 23, ಸಿಕ್ಕಿಂನಲ್ಲಿ 1, ತಮಿಳುನಾಡಿನಲ್ಲಿ 50, ತೆಲಂಗಾಣದಲ್ಲಿ 33, ತ್ರಿಪುರದಲ್ಲಿ 2 ಹಾಗೂ ಉತ್ತರ ಪ್ರದೇಶದಲ್ಲಿ 22 ವೈದ್ಯಕೀಯ ಕಾಲೇಜುಗಳು ಇವೆ. ಆದರೆ, ಇಲ್ಲಿನ ದುಬಾರಿ ವೆಚ್ಚದ ಪರಿಣಾಮದಿಂದಾಗಿ ವಿದೇಶಗಳಿಗೆ ತೆರಳಿತ್ತಿದ್ದಾರೆ ಎಂದು ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ