ಪ್ರಧಾನಿ ಮೋದಿ ತಾಯಿ ನಿಂದನೆ: ಕ್ಷಮೆ ಕೇಳಿದ ಬಿಬಿಸಿ

ಗುರುವಾರ, 4 ಮಾರ್ಚ್ 2021 (09:26 IST)
ನವದೆಹಲಿ: ಪ್ರಧಾನಿ ಮೋದಿ ಮತ್ತು ಅವರ ತಾಯಿ 99 ವರ್ಷದ ಹೀರಾಬೆನ್ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಬಗ್ಗೆ ಬಿಬಿಸಿ ನಿರೂಪಕರು ಕ್ಷಮೆ ಯಾಚಿಸಿದ್ದಾರೆ.

 
ಬಿಬಿಸಿ ಏಷ್ಯನ್ ನೆಟ್ವರ್ಕ್ ಆಯೋಜಿಸಿದ್ದ ಬಿಗ್ ಡಿಬೇಟ್ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಧಾನಿ ಮೋದಿ ಮತ್ತು ಅವರ ತಾಯಿ ಬಗ್ಗೆ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಕೃಷಿ ಮಸೂದೆ ಬಗ್ಗೆ ಚರ್ಚೆ ನಡೆಯಿತು.

 ಈ ವೇಳೆ ಕರೆ ಮಾಡಿದ ಸೈಮನ್ ಎಂಬಾತ ಏಕಾಏಕಿ ಪ್ರಧಾನಿ ಮತ್ತು ತಾಯಿ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದರಿಂದ ಗಲಿಬಿಲಿಗೊಂಡ ನಿರೂಪಕಿ ಕರೆ ಅರ್ಧದಲ್ಲೇ ತುಂಡರಿಸಿದ್ದರು. ಇದೀಗ ಈ ಘಟನೆಗಾಗಿ ನಿರೂಪಕಿ ಕ್ಷಮೆ ಯಾಚಿಸಿದ್ದಾರೆ.

ಇದು ಮೋದಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಇಷ್ಟೆಲ್ಲಾ ಘಟನೆ ನಡೆದರೂ ಕೇವಲ ನಿರೂಪಕಿ ಮಾತ್ರ ಕ್ಷಮೆ ಕೇಳಿದ್ದಾರೆ. ಬಿಬಿಸಿ ಪ್ರತಿಕ್ರಿಯಿಸಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ