ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ : ಮಹೇಶ್ ಜೇಠ್ಮಾಲನಿ

ಬುಧವಾರ, 1 ಫೆಬ್ರವರಿ 2023 (11:15 IST)
ನವದೆಹಲಿ : ಚೀನಾವನ್ನು ಓಲೈಸಲು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಬಿಸಿ ದುರುದ್ದೇಶಪೂರಿತ ಸಾಕ್ಷ್ಯಚಿತ್ರ ತಯಾರಿಸಿದೆ ಎಂದು ಬಿಜೆಪಿ ಹಿರಿಯ ಸಂಸದ, ವಕೀಲ ಮಹೇಶ್ ಜೇಠ್ಮಾಲನಿ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಟ್ವಿಟ್ಟರ್ನಲ್ಲಿ ಚೀನಾದ ಟೆಲಿಕಾಂ ಕಂಪನಿ ಹವಾವೇಯಿಂದ ಬಿಬಿಸಿ ಹಣವನ್ನು ಪಡೆದುಕೊಳ್ಳುತ್ತಿರುವ ಲಿಂಕ್ ಸೇರಿಸಿ ಟ್ವೀಟ್ ಮಾಡಿದ್ದಾರೆ. ಬಿಬಿಸಿ ಯಾಕೆ ಭಾರತ ವಿರೋಧಿಯಾಗಿದೆ? ಯಾಕೆಂದರೆ ಚೀನಾದ ಸರ್ಕಾರಕ್ಕೆ ಸಂಬಂಧಿಸಿದ ಹುವಾವೇ ಕಂಪನಿಯಿಂದ ಹಣ ಪಡೆದುಕೊಳ್ಳುತ್ತಿದೆ.

ಬಿಬಿಸಿ ಈಗ ಚೀನಾ ಓಲೈಕೆಯಲ್ಲಿ ತೊಡಗಿದೆ. ಇದರೊಂದಿಗೆ ಬಿಬಿಸಿಗೆ ಅಪ್ತರಾದ ಕಾಮ್ರೆಡ್ ಜೈರಾಂ (ಕಾಂಗ್ರೆಸ್ ನಾಯಕ ಜೈರಾಂ ರಮೇಶ್) ಅವರ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿದೆ. ಇದು ಸರಳವಾದ ನಗದುಪ್ರಚಾರದ ಒಪ್ಪಂದವಾಗಿದ್ದು, ಬಿಬಿಸಿ ಮಾರಾಟಕ್ಕಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ