‘ದೇಶ ಮೊದಲು, ಪಕ್ಷ ಬಳಿಕ, ನಾನು ಎಂಬುವುದು ಕೊನೆ’- ಕೊನೆಗೂ ಮೌನ ಮುರಿದ ಎಲ್‍.ಕೆ. ಅಡ್ವಾಣಿ

ಶುಕ್ರವಾರ, 5 ಏಪ್ರಿಲ್ 2019 (13:08 IST)
ನವದೆಹಲಿ : 91 ವರ್ಷದ ಎಲ್‍.ಕೆ. ಅಡ್ವಾಣಿ ಅವರಿಗೆ ಟಿಕೆಟ್ ನೀಡದೇ ಬಿಜೆಪಿ ಹಿರಿಯ ನಾಯಕರನ್ನು ಕಡೆಗಣಿಸಿದೆ ಎನ್ನುವ ಆರೋಪದ ಬಂದಿರುವ ಹಿನ್ನಲೆಯಲ್ಲಿ ಇದೀಗ ಎಲ್‍.ಕೆ. ಅಡ್ವಾಣಿ ಅವರು ಬ್ಲಾಗಿನಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯದ ಅಡ್ವಾಣಿಯವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಏಪ್ರಿಲ್ 6 ರಂದು ಬಿಜೆಪಿ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ದೇಶದ ಜನರಿಗೆ ಬ್ಲಾಗಿನಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದಾರೆ.

 

ನನ್ನ ಜೀವನಕ್ಕೆ ಮೂಲ ಮಂತ್ರವಾದ ‘ದೇಶ ಮೊದಲು, ಪಕ್ಷ ಬಳಿಕ, ನಾನು ಎಂಬುವುದು ಕೊನೆ’ ಎಂಬ ತತ್ವದ ಮೇಲೆಯೇ ನಡೆದಿದ್ದು, ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಸಂವಿಧಾನದಡಿಯೇ ನಡೆದುಕೊಂಡು ಬಂದಿದೆ. ಬಿಜೆಪಿ ದೇಶದ ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿದೆ. ಸತ್ಯ ರಾಷ್ಟ್ರಿಯ ನಿಷ್ಠೆ, ಪ್ರಜಾಪ್ರಭುತ್ವದ ಸಿದ್ಧಾಂತದ ಮೇಲೆಯೇ ನಡೆದಿದೆ. ಆ ಮೂಲಕ ರಾಷ್ಟ್ರಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದೆ. ಉತ್ತಮ ಸರ್ಕಾರ ನೀಡುವುದು ಪಕ್ಷ ಬಹುಮುಖ್ಯ ಉದ್ದೇಶವಾಗಿದ್ದು, ತುರ್ತು ಪರಿಸ್ಥಿಯ ವೇಳೆಯಲ್ಲಿ ಹೋರಾಟವನ್ನು ನಡೆಸಿದ್ದು ಮರೆಯಲು ಸಾಧ್ಯವಿಲ್ಲ. ನಿಜವಾದ ಚುನಾವಣೆಗಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಬ್ಬದಂತೆ, ಇದೇ ವೇಳೆ ಚುನಾವಣೆಗಳು ದೇಶದ ಜನರ, ಪಕ್ಷಗಳ, ಮಾಧ್ಯಮಗಳ, ಅಧಿಕಾರಿಗಳ ಆತ್ಮಾವಲೋಕನಕ್ಕಾಗಿ ಒಂದು ಸಂದರ್ಭವಾಗಿದ್ದು, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೂ ಇದರ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಬರೆದುಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ