ಆಡಳಿತಾರೂಢ ಟಿಎಂಸಿ ಭರ್ಜರಿ ಜಯದತ್ತ ಸಾಗುತ್ತಿರುವುದನ್ನು ಚುನಾವಣೆ ಫಲಿತಾಂಶಗಳು ಸಾಬೀತು ಮಾಡಿದ ಕೂಡಲೇ ಮಮತಾ ಬ್ಯಾನರ್ಜಿ ಅಧಿಕೃತ ನಿವಾಸದ ಹೊರಗೆ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಪಶ್ಚಿಮ ಬಂಗಾಳದ 293 ಸೀಟುಗಳಿಗೆ ಮತಎಣಿಕೆ ಆರಂಭವಾದ ಕೆಲವು ಗಂಟೆಗಳಲ್ಲಿ ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಪುನಃ ಅಧಿಕಾರದ ಗದ್ದುಗೆಗೆ ಏರಿ ಮಮತಾ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ.