ವೃದ್ಧ ತಾಯಿಯನ್ನು ಮನೆಯಲ್ಲಿ ಉಪವಾಸ ಕೆಡವಿ ಮಗನ ಜಾಲಿ ಟ್ರಿಪ್: ತಾಯಿ ಸಾವು

Krishnaveni K

ಮಂಗಳವಾರ, 24 ಡಿಸೆಂಬರ್ 2024 (09:44 IST)
ಭೋಪಾಲ್: ವೃದ್ಧ ತಾಯಿಯನ್ನು ಮನೆಯಲ್ಲಿ ಉಪವಾಸ ಕೂಡಿ ಹಾಕಿ ಮಗ ಟ್ರಿಪ್ ಹೋಗಿದ್ದು, ತಾಯಿ ಹಸಿವಿನಿಂದ ಸಾವನ್ನಪ್ಪಿರುವ ಧಾರುಣ ಘಟನೆ ಭೋಪಾಲ್ ನಲ್ಲಿ ನಡೆದಿದೆ.

ಮಕ್ಕಳಿಗಾಗಿ ಅಮ್ಮ ಎಷ್ಟೋ ತ್ಯಾಗ ಮಾಡುತ್ತಾಳೆ. ಮಗುವನ್ನು ಸಾಕಿ ಬೆಳೆಸಲು ಎಷ್ಟೋ ಕಷ್ಟಗಳನ್ನು ಎದುರಿಸುತ್ತಾಳೆ. ಆದರೆ ಅದೇ ತಾಯಿಗೆ ವಯಸ್ಸಾದಾಗ ಮಗ ಮಾಡಿರುವ ಕೃತ್ಯ ತಿಳಿದರೆ ನಿಜಕ್ಕೂ ಬೇಸರವಾಗುತ್ತದೆ. ತನ್ನ ಹೆತ್ತ ತಾಯಿಯನ್ನು ಈ ಮಗ ನಡೆಸಿಕೊಂಡ ರೀತಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹದ್ದು.

ಲಲಿತ್ ದುಬೆ ಎಂಬ 80 ವರ್ಷದ ವಯೋವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿದ ಮಗ ಅರುಣ್ ದುಬೆ ತನ್ನ ಪತ್ನಿಯೊಂದಿಗೆ ಉಜ್ಜಯಿನಿಗೆ ಹೋಗಿದ್ದ. ಅಲ್ಲಿಂದ ತನ್ನ ಸಹೋದರನಿಗೆ ಕರೆ ಮಾಡಿ ತಾನು ಫ್ಯಾಮಿಲಿ ಸಮೇತ ಟ್ರಿಪ್ ಗೆ ಹೋಗುತ್ತಿರುವುದಾಗಿ ಹೇಳಿದ್ದ.

ಕೆಲವು ದಿನ ಬಳಿಕ ಮತ್ತೊಬ್ಬ ಪುತ್ರ ತನ್ನ ಸ್ನೇಹಿತನನ್ನು ಮನೆಗೆ ಕಳುಹಿಸಿ ಅಮ್ಮ ಇದ್ದಾರಾ ಎಂದು ನೋಡಿಕೊಂಡು ಬರಲು ಕಳುಹಿಸಿದ್ದ. ಮನೆಗೆ ಬಂದು ನೋಡಿದರೆ ತಾಯಿ ನೀರು, ಆಹಾರವಿಲ್ಲದೇ ಶವವಾಗಿದ್ದಳು. ಮರಣೋತ್ತರ ಪರೀಕ್ಷೆ ನಡಸಿದಾಗ ಹಸಿವಿನಿಂದಲೇ ಸಾವನ್ನಪ್ಪಿದ್ದು ಖಚಿತವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ