ಭಗವಾನ್ ಹನುಮಾನ್ ಮುಸ್ಲಿಂ ಎಂದು ಹೇಳಿ ವಿವಾದ ಹುಟ್ಟುಹಾಕಿದ ಬುಕ್ಕಲ್ ನವಾಬ್

ಶುಕ್ರವಾರ, 21 ಡಿಸೆಂಬರ್ 2018 (15:05 IST)
ಲಖೌನ್ : ಭಗವಾನ್ ಹನುಮಂತನ ಧರ್ಮದ ಬಗ್ಗೆ ಮಾತನಾಡುವುದರ ಮೂಲಕ ಇದೀಗ ಬಿಜೆಪಿ ವಿಧಾನ ಪರಿಷತ್ ಸದಸ್ಯ ಬುಕ್ಕಲ್ ನವಾಬ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.


ಈ ಹಿಂದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಹನುಮಂತ ದಲಿತ ಜಾತಿಗೆ ಸೇರಿದವನು ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಹನುಮಂತನ ಬಗ್ಗೆ ಮಾತನಾಡಿದ  ಬುಕ್ಕಲ್ ನವಾಬ್,’ ಭಗವಾನ್ ಹನುಮಾನ್ ಮುಸ್ಲಿಂ ಆಗಿದ್ದರು’ ಎಂದು ಹೇಳಿದ್ದಾರೆ.


ಹಾಗಾಗಿಯೇ ಹನುಮಾನ್ ಗೆ ಹೋಲಿಕೆಯಾಗುವ ಹೆಸರುಗಳು ಮುಸ್ಲಿಂರಲ್ಲಿ ಈಗಲೂ ಸಾಕಷ್ಟಿವೆ. ರೆಹಮಾನ್, ರಂಜಾನ್, ಫಾರ್ ಮಾನ್, ಜಿಷಾನ್, ಕುರ್ಬಾನ್ ಎಂಬ ಹೆಸರುಗಳು ಹನುಮಾನ್ ಎಂಬ ಹೆಸರನ್ನೇ ಹೋಲುತ್ತವೆ ಎಂದು ಹೇಳಿದ್ದು ಇದೀಗ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ