ಬೆಂಗಳೂರು: ಇಂದು ನಾಡಿನೆಲ್ಲೆಡೆ ಭಕ್ತಿಯಿಂದ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ರಾಮ ಬಂಟ ಹನುಮನ ಜನನ ಹೇಗಾಯ್ತು ಎಂಬ ಕತೆ ಗೊತ್ತಿಲ್ಲದೇ ಇದ್ದರೆ ಇದನ್ನು ಓದಿ.
ಅಂಗಿರ ಎಂಬ ಮುನಿ ಒಮ್ಮೆ ಇಂದ್ರ ದೇವನ ಆಸ್ಥಾನಕ್ಕೆ ಬರುತ್ತಾನೆ. ತನ್ನ ಆಸ್ಥಾನಕ್ಕೆ ಬಂದ ಮುನಿಗೆ ಇಂದ್ರ ಪುಂಜಿಕ್ಸತಲ ಎಂಬ ನೃತ್ಯಗಾತಿಯಿಂದ ನೃತ್ಯ ಮಾಡಿಸಿ ಸಂತೋಷ ಪಡಿಸಲು ಯತ್ನಿಸುತ್ತಾನೆ. ಆದರೆ ಇದರ ಬಗ್ಗೆ ಆಸಕ್ತಿಯೇ ಇರದ ಅಂಗಿರ ಮುನಿ ನೃತ್ಯದ ಬಗ್ಗೆ ಏನೂ ಹೇಳದೇ ಮೌನವಾಗಿದ್ದಾಗ ಇಂದ್ರ ಮತ್ತು ನೃತ್ಯಗಾತಿಗೆ ಅವಮಾನವಾದಂತಾಗುತ್ತದೆ. ಹೀಗಾಗಿ ನೃತ್ಯಗಾತಿ ಮುನಿಗೆ ಅವಮಾನ ಮಾಡಲು ಮುಂದಾಗುತ್ತಾಳೆ.
ಇದರಿಂದ ಕೋಪಗೊಂಡ ಮುನಿ ಅಂಗಿರ ನೃತ್ಯಗಾತಿಗೆ ಮುಂದಿನ ಜನ್ಮದಲ್ಲಿ ನೀನು ಹೆಣ್ಣು ಮಂಗನಾಗಿ ಭೂ ಲೋಕದಲ್ಲಿ ಜನಿಸುವಂತಾಗಲಿ’ ಎಂದು ಶಾಪ ನೀಡುತ್ತಾನೆ. ಆಗ ಭಯಗೊಂಡ ನೃತ್ಯಗಾತಿ ಮುನಿಯ ಕಾಲಿಗೆ ಬಿದ್ದು ಕ್ಷಮೆ ನೀಡುವಂತೆ ಯಾಚಿಸುತ್ತಾಳೆ. ಆಗ ಅಂಗಿರ ಮುನಿ ‘ನಿನಗೆ ದೈವಾಂಶ ಸಂಭೂತನಾದ, ಪರಮಾತ್ಮನ ಸೇವಕನಾದ ಮಹಾನ್ ಶಕ್ತಿಶಾಲಿ ಪುತ್ರ ಜನಿಸುತ್ತಾನೆ’ ಎಂದು ವರ ನೀಡುತ್ತಾರೆ.
ಅದರಂತೆ ನೃತ್ಯಗಾತಿ ವಾನರ ರಾಜ ಕುಂಜರನ ಪುತ್ರಿಯಾಗಿ ಜನಿಸುತ್ತಾಳೆ. ಮುಂದೆ ಕಪಿರಾಜ ಕೇಸರಿಯನ್ನು ವಿವಾಹವಾಗಿ ಇವರಿಬ್ಬರಿಗೆ ಹನುಮಂತ ಜನ್ಮ ತಾಳುತ್ತಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ