ಸಿಎಂ ಯೋಗಿ ಬಳಿಕ ಹನುಮಾನ್ ಹೆಸರಿನಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಬಿಜೆಪಿ ಸಂಸದೆ
ಹನುಮಂತ ದಲಿತನಾಗಿದ್ದ ಮತ್ತು ಮನುವಾದಿಗಳ ಸೇವಕನಾಗಿದ್ದ. ರಾಮನಿಗೆ ಅಷ್ಟೆಲ್ಲಾ ಸೇವೆ ಮಾಡಿದರೂ ಹನುಮಂತನನ್ನು ಮಂಗನಂತೆ ಚಿತ್ರಿಸಲಾಯಿತು. ದಲಿತರನ್ನೂ ಮಂಗ ಮತ್ತು ರಾಕ್ಷಸರು ಎಂದೇ ಪರಿಗಣಿಸಲಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ರಾಮನಿಗೆ ಅಷ್ಟೆಲ್ಲಾ ಸೇವೆ ಮಾಡಿದರೂ ಹನುಮಂತನನ್ನು ಮಂಗನಾಗಿ ಯಾಕೆ ಚಿತ್ರಿಸಲಾಯಿತು? ಅವನನ್ನು ಯಾಕೆ ಮನುಷ್ಯನನ್ನಾಗಿ ಮಾಡಲಿಲ್ಲ? ಆ ಕಾಲದಲ್ಲೇ ಹನುಮಂತ ದಲಿತ ಎನ್ನುವ ಕಾರಣಕ್ಕೆ ಅಷ್ಟೊಂದು ಅವಮಾನಕ್ಕೆ ಗುರಿಯಾಗಬೇಕಾಯಿತು. ಅಂದರೆ ದಲಿತರೂ ಮನುಷ್ಯರಲ್ಲವೇ?’ ಎಂದು ಸಂಸದೆ ಸಾವಿತ್ರಿ ಹೇಳಿಕೆ ನೀಡಿದ್ದಾರೆ.