ನವದೆಹಲಿ : ಕೊರೊನಾ ಔಷಧಿ ಬಿಡುಗಡೆ ಮಾಡಿದ ಪತಾಂಜಲಿ ಕಂಪೆನಿಗೆ ಆಯುಷ್ ಇಲಾಖೆ ಬಿಗ್ ಶಾಕ್ ನೀಡಿದೆ.
ಕೊರೊನಾ ವೈರಸ್ ಗೆ ಔಷಧ ಕಂಡುಹಿಡಿದ ಪತಾಂಜಲಿ , ಈ ಔಷಧ ಶೇ.100ರಷ್ಟು ಉತ್ತಮ ಫಲಿತಾಂಶ ನೀಡಲಿದೆ. 5ರಿಂದ 14 ದಿನ ಅವಧಿಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ ಎನ್ನಲಾಗಿದ್ದು, ಇದು ದೊಡ್ಡಮಟ್ಟದಲ್ಲಿ ಪ್ರಚಾರವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ ಇಲಾಖೆ, ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೊನಾ ದೂರವಾಗುತ್ತದೆ ಎಂಬ ಸಲಹೆ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ತಿಳಿಸಿದೆ.