ಬಟ್ಟೆ ವ್ಯಾಪಾರಿ, ಸಕ್ಕರೆ ವ್ಯಾಪಾರಿಗೆ ಕೊರೊನಾ ಸೋಂಕು

ಮಂಗಳವಾರ, 23 ಜೂನ್ 2020 (19:29 IST)
ಬಟ್ಟೆ ವ್ಯಾಪಾರಿ ಹಾಗೂ ಸಕ್ಕರೆ ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರಿಗೆ  ಕೋವಿಡ್ ಸೋಂಕು ದೃಢಪಟ್ಟಿದೆ. ರಾಣೆಬೆನ್ನೂರಿನ ಬಟ್ಟೆ ವ್ಯಾಪಾರಿ ಹಾಗೂ ಶಿಗ್ಗಾಂವಿಯ ಸಕ್ಕರೆ ವ್ಯಾಪಾರಿ ಹಾಗೂ ಪಿಗ್ಮಿ ಏಜೆಂಟ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 43 ವ್ಯಕ್ತಿಗಳಿಗೆ ಸೋಂಕು ತಗಲಿದ್ದು, ಈ ಪೈಕಿ 24 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 19 ಪ್ರಕರಣಗಳು ಸಕ್ರಿಯವಾಗಿವೆ  ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ತಿಳಿಸಿದ್ದಾರೆ.

P-9411 ಹಾಗೂ P-9412  ಇಬ್ಬರಿಗೆ ಹೊಸದಾಗಿ ಪಾಸಿಟಿವ್ ಬಂದಿದೆ. ಬ್ಯಾಡಗಿಯ ಪೊಲೀಸ್ ಕಾನ್‍ಸ್ಟೇಬಲ್ (P-7030) ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ