ಚೆನ್ನೈನಲ್ಲಿ 142ಕೋಟಿ ಅಕ್ರಮ ನಗದು ವಶ

ಶನಿವಾರ, 10 ಡಿಸೆಂಬರ್ 2016 (16:37 IST)
ಚೆನ್ನೈನ ವಿಭಿನ್ನ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ದಾಖಲೆಗಳಿಲ್ಲದ 142ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ನೋಟು ನಿಷೇಧದ ಬಳಿಕ ವಶಪಡಿಸಿಕೊಳ್ಳಲಾದ ದೊಡ್ಡ ಮೊತ್ತದ ಹಣ ಮತ್ತು ಚಿನ್ನದ ರಾಶಿ ಇದಾಗಿದೆ. 
ಇದರಲ್ಲಿ 10ಕೋಟಿ ಹೊಸ ನೋಟು ಮತ್ತು 127ಕೆಜಿ ಬಂಗಾರ ಕೂಡ ಸೇರಿದೆ. 
 
ಮರಳು ಗಣಿಗಾರಿಕೆ ನಡೆಸುತ್ತಿದ್ದ ಅನೇಕ ಪ್ರತಿಷ್ಠಿತರ ಮನೆಗಳ ಮೇಲೆ ದಾಳಿ ನಡೆಸಿ ಈ ಭಾರಿ ಮೊತ್ತದ ಅಕ್ರಮ ಸಂಪತ್ತನ್ನು ವಶ ಪಡಿಸಿಕೊಳ್ಳಲಾಗಿದ್ದು ಜಯಲಲಿತಾ ಗೆಳತಿ ಶಶಿಕಲಾ ಮತ್ತು ಸಿಎಂ ಪನ್ನೀರ್ ಸೆಲ್ವಂ ಆಪ್ತರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಇದರ ಬೆನ್ನಲ್ಲೇ ವೆಲ್ಲೂರಿನಲ್ಲಿ ನಡೆಸಿದ ಶೋಧದಲ್ಲಿ ಸುಮಾರು 24ಕೋಟಿ ಅಕ್ರಮ ನಗದು ಪತ್ತೆಯಾಗಿದೆ. ಕಾರಿನಲ್ಲಿ ಅಡಗಿಸಿಟ್ಟಿದ್ದ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು ಅವೆಲ್ಲವೂ 2,000 ರೂಪಾಯಿ ನೋಟುಗಳಾಗಿವೆ. 
 
ಹಣ ಹೊಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ