ಬಿಹಾರ: ಇಲ್ಲಿನ ಗೋಪಾಲ್ಗಂಜ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಪತಿಯನ್ನು ತೊರೆದು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಸೋದರ ಸೊಸೆಯನ್ನೇ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿರುವ ಘಟನೆ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಸಲಿಂಗ ಸಂಬಂಧದಲ್ಲಿ ತೊಡಗಿಸಿಕೊಂಡ ನಂತರ ಸುಮನ್ ತನ್ನ ಪತಿಯನ್ನು ತೊರೆದು ತನ್ನ ಸೊಸೆ ಶೋಭಾಳೊಂದಿಗೆ ಓಡಿಹೋಗಿ ಸಪ್ತಪದಿ ತುಳಿಸಿದ್ದಾರೆ.
ಭಾರತದಲ್ಲಿ, ವಿಶೇಷವಾಗಿ ಮಹಿಳೆಯರ ನಡುವಿನ ಸಲಿಂಗ ವಿವಾಹದ ಅತ್ಯಂತ ಅಪರೂಪದ ಪ್ರಕರಣ ಕಂಡು ಬರುತ್ತದೆ. ಆದರೆ ಇದೀಗ ಬಿಹಾರದಲ್ಲಿ ನಡೆದ ಸಲಿಂಗಾ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ಆದಾಗ್ಯೂ, ದಂಪತಿಗಳ ವಿವಾಹವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಸಿಯಾದ ಚರ್ಚೆಯನ್ನು ಹುಟ್ಟುಹಾಕಿತು, ಕೆಲವರು ಅವರ ನಿರ್ಧಾರವನ್ನು ಬೆಂಬಲಿಸಿದರು ಆದರೆ ಇತರರು ಇದನ್ನು "ಅಸ್ವಾಭಾವಿಕ", "ನೈಸರ್ಗಿಕ ನಿಯಮಗಳ ಉಲ್ಲಂಘನೆ" ಎಂದು ಕರೆದರು ಮತ್ತು ಇದನ್ನು "ಕಲಿಯುಗ್ (ಕತ್ತಲೆಯುಗ)" ಎಂದು ಕೂಡ ಕರೆದರು.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಗೋಪಾಲ್‌ಗಂಜ್ ಜಿಲ್ಲೆಯ ಬೆಲ್ವಾ ಗ್ರಾಮದ ಸ್ಥಳೀಯ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಸೋದರ ಸೊಸೆಯೊಂದಿಗೆ ಹಾರ ಮತ್ತು ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.
ಮಹಿಳೆಯನ್ನು, ವಿಶೇಷವಾಗಿ ತನ್ನ ಸ್ವಂತ ಸೊಸೆಯನ್ನು ಮದುವೆಯಾಗುವ ನಿರ್ಧಾರದ ಬಗ್ಗೆ ಕೇಳಿದಾಗ, ಶೋಭಾ ನನ್ನ ಜೀವನದ ಪ್ರೀತಿ. ಬೇರೆಯವರನ್ನು ಮದುವೆಯಾದರೆ ಆಕೆಯನ್ನು ಕಳೆದುಕೊಳ್ಳುವುದನ್ನು ನಾನು ಊಹಿಸಲೂ ಸಾಧ್ಯವಾಗಲಿಲ್ಲ. ಒಬ್ಬರನ್ನೊಬ್ಬರು ಬಿಟ್ಟಿರಕ್ಕೆ ಆಗಲಾರದೆ, ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲವನ್ನೂ ಬಿಟ್ಟು ಮದುವೆಯಾಗಲು ನಿರ್ಧರಿಸಿದೆವು ಎಂದು ಸುಮನ್ ಹೇಳಿದರು.
ಶೋಭಾ ಕೂಡ ಇದೇ ಹಾದಿಯಲ್ಲಿ ಮಾತನಾಡಿ, ತಾವು ಜೊತೆಗಿರುವವರೆಗೂ ಜಗತ್ತು ಏನು ಹೇಳುತ್ತದೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.