ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಫಲಿತಾಂಶದ ಅಂತಿಮ ಚಿತ್ರಣ ಇಂತಿದೆ

ಬುಧವಾರ, 26 ಏಪ್ರಿಲ್ 2017 (19:44 IST)
ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಪತಿಷ್ಠೆಯ ಕಣವಾಗಿದ್ದ ನವದೆಹಲಿಯ ಮೂರು ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ತನ್ನ ಅಸ್ತಿತ್ವವನ್ನ ಜಗತ್ತಿಗೆ ಎತ್ತಿ ತೋರಿಸಿದೆ.
 

ಬಿಜೆಪಿ ಭಾರೀ ಅಂತರದಿಂದ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನ 2ನೇ ಮತ್ತು ಕಾಂಗ್ರೆಸ್ ಪಕ್ಷವನ್ನ 3ನೇ ಸ್ಥಾನಕ್ಕೆ ನೂಕಿದೆ. ಉತ್ತರ, ದಕ್ಷಿಣ ಮತ್ತು ಪೂರ್ವ ದೆಹಲಿಯ ಒಟ್ಟು 270 ಸ್ಥಾನಗಳ ಪೈಕಿ ಬಿಜೆಪಿ 183, ಆಮ್ ಆದ್ಮಿ 41, ಕಾಂಗ್ರೆಸ್ 36 ಸ್ಥಾನಗಳನ್ನ ಗಳಿಸಿವೆ.

ಉತ್ತರಪ್ರದೇಶ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಮೂಲಕ ಬಿಜೆಪಿ ಗೆದ್ದಿತ್ತು. ದೆಹಲಿಯಲ್ಲಿ ಬಿಜೆಪಿಯನ್ನ ಸೋಲಿಸಿ ರಾಷ್ಟ್ರಕ್ಕೆ ದೊಡ್ಡ ಸಂದೇಶ ನೀಡುವ ಆಮ್ ಆದ್ಮಿ ಪ್ರಯತ್ನ ಹುಸಿಯಾಗಿದೆ.

ದೆಹಲಿ ಪಾಲಿಕೆಯ ಫಲಿತಾಂಶ ಇಂತಿದೆ:

ಪಕ್ಷ      ಉತ್ತರ ದೆಹಲಿ    ದಕ್ಷಿಣ ದೆಹಲಿ  ಪೂರ್ವ ದೆಹಲಿ   ಒಟ್ಟು ಸ್ಥಾನ
ಬಿಜೆಪಿ       64                  71               47            182

ಎಎಪಿ       21                   16               11              48

ಕಾಂಗ್ರೆಸ್    15                  11                03             29

ಇತರೆ         03                06               01              11

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ