ವಕ್ಫ್ ಬೋರ್ಡ್ ಪರ ಕೋಟ್ಯಾಂತರ ಮತ: ಬಿಜೆಪಿಗೆ ಪಾಕಿಸ್ತಾನದ ಮೇಲೆ ಸಂಶಯ

Krishnaveni K

ಗುರುವಾರ, 26 ಸೆಪ್ಟಂಬರ್ 2024 (10:14 IST)
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ವಕ್ಫ್ ಬೋರ್ಡ್ ಪರ-ವಿರೋಧ ಚರ್ಚೆಗೆ ಸಾರ್ವಜನಿಕರಿಗೂ ಆಹ್ವಾನ ನೀಡಲಾಗಿತ್ತು. ಆದರೆ ವಕ್ಫ್ ಬೋರ್ಡ್ ಗೆ ತಿದ್ದುಪಡಿ ಬೇಡ ಎಂದು ಕೋಟ್ಯಾಂತರ ಮತ ಬಂದಿದ್ದು ಈಗ ಬಿಜೆಪಿಗೆ ಪಾಕಿಸ್ತಾನದ ಮೇಲೆ ಸಂಶಯ ಶುರುವಾಗಿದೆ.

ವಕ್ಫ್ ಬೋರ್ಡ್ ತಿದ್ದುಪಡಿ ಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದರಲ್ಲಿ ವಕ್ಫ್ ಬೋರ್ಡ್ ಪರ ಸುಮಾರು. 1.25 ಕೋಟಿ ಪ್ರತಿಕ್ರಿಯೆ ಬಂದಿದೆ. ಇದರ ಬಗ್ಗೆ ಬಿಜೆಪಿ ಸಂಶಯ ವ್ಯಕ್ತಪಡಿಸಿದೆ.

ಇದರ ಹಿಂದೆ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರ ಪಾಕಿಸ್ತಾನ ಅಥವಾ ಚೀನಾ ಇಲ್ಲವೇ ಸದಾ ಭಾರತದ ವಿರುದ್ಧ ಕೆಂಡ ಕಾರುವ ಝಾಕಿರ್ ನಾಯಕ್ ನಂತಹ ನಾಯಕರ ಕೈವಾಡವಿರಬಹುದೇ ಎಂಬ ಸಂಶಯ ಮೂಡಿದೆ. ಈ ಹಿನ್ನಲೆಯಲ್ಲಿ ಸೂಕ್ತ ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಈ ಮಟ್ಟದ ಪ್ರತಿಕ್ರಿಯೆ ಬಂದಿರುವುದು ಜಾಗತಿಕವಾಗಿ ದಾಖಲೆಯೇ. ಭಾರತದೊಳಗಿನಿಂದ ಮಾತ್ರ ಇಷ್ಟೊಂದು ಪ್ರಮಾಣದಲ್ಲಿ ಪ್ರತಿಕ್ರಿಯೆ ಬರುವುದು ಅಸಾಧ್ಯ ಎನ್ನುವುದು ಬಿಜೆಪಿ ನಾಯಕರ ಅಭಿಮತವಾಗಿದೆ. ಆದರೆ ಇದನ್ನು ಟೀಕಿಸಿರುವ ಕಾಂಗ್ರೆಸ್, ಬಿಜೆಪಿಗರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಇಷ್ಟು ಜನಸಂಖ್ಯೆಯಿರುವ ರಾಷ್ಟ್ರದಲ್ಲಿ ಕೇವಲ 1.5 ಪ್ರತಿಶತ ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೂ ಸಂಶಯಿಸುತ್ತಿದೆ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ