ಉ.ಪ್ರದೇಶ ಚುನಾವಣೆಯಲ್ಲಿ ಅಭಿವೃದ್ಧಿಗಾಗಿ ಮತ, ರಾಮಮಂದಿರ ನಿರ್ಮಾಣಕ್ಕಲ್ಲ: ರಾಜನಾಥ್ ಸಿಂಗ್

ಶನಿವಾರ, 28 ಮೇ 2016 (10:05 IST)
ಮುಂದಿನ ವರ್ಷದಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿಗಾಗಿ ಮತ ಕೇಳುತ್ತೇವೆಯೇ ಹೊರತು ರಾಮಮಂದಿರ ನಿರ್ಮಾಣ ವಿಷಯ ಕುರಿತಂತಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
 
ರಾಮ ಮಂದಿರ ನಿರ್ಮಾಣ ರಾಜಕೀಯ ವಿಷಯವಲ್ಲ ಸಾಂಸ್ಕ್ರತಿಕ ವಿಷಯವಾಗಿದೆ. ಇದೀಗ ರಾಮಮಂದಿರ ನಿರ್ಮಾಣ ವಿಷಯ ನ್ಯಾಯಾಲಯದಲ್ಲಿರುವುದರಿಂದ ಸುಪ್ರೀಂಕೋರ್ಟ್ ತೀರ್ಪಿಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
 
ದೇಶದ ಬಹುದೊಡ್ಡ ರಾಜ್ಯವಾದ ಉತ್ತರಪ್ರದೇಶ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಜನತೆಯನ್ನು ಓಲೈಸಲಾಗುವುದು ಎಂದು ಹೇಳಿದ್ದಾರೆ.
 
ಕೋಮುವಾದ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಲಾಭವಾಗಲಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಬಿಜೆಪಿ ಯಾವತ್ತೂ ಕೋಮುವಾದದ ರಾಜಕಾರಣ ಮಾಡಿಲ್ಲ. ಕೋಮುವಾದ ದೇಶಕ್ಕೆ ಅಪಾಯಕಾರಿ ಎನ್ನುವುದನ್ನು ನಾವು ನಂಬುತ್ತೇವೆ ಎಂದು ತಿಳಿಸಿದ್ದಾರೆ.
 
ಪ್ರಧಾನಿ ಮೋದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭಾರಿ ಬಹುಮತದಿಂದ ಅಧಿಕಾರದ ಗದ್ದುಗೆ ಏರುತ್ತದೆ ಎನ್ನುವ ವಿಶ್ವಾಸವಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ