ಸಂಖ್ಯಾಬಲವಿದ್ದೂ ಅವಿಶ್ವಾಸಮತಕ್ಕೆ ಬಿಜೆಪಿ ಮಿತ್ರ ಪಕ್ಷಗಳನ್ನೆಲ್ಲಾ ಸೆಳೆಯುತ್ತಿರುವುದೇಕೆ?

ಶುಕ್ರವಾರ, 20 ಜುಲೈ 2018 (09:00 IST)
ನವದೆಹಲಿ: ಇಂದು ಸಂಸತ್ತಿನಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಲಿರುವ ಅವಿಶ್ವಾಸ ಮತ ವಿಪಲವಾಗುವಂತೆ ಮಾಡಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿದೆ.

ಬಿಜೆಪಿಗೆ ಬಹುಮತದ ಕೊರತೆ ಇಲ್ಲ. ಹಾಗಿದ್ದರೂ ತನ್ನ ಹಳೆಯ ಮಿತ್ರರನ್ನೆಲ್ಲಾ ತನ್ನೆಡೆಗೆ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಇಂದಿನ ಅವಿಶ್ವಾಸ ಮತಕ್ಕೆ ಶಿವಸೇನೆ ಬಿಜೆಪಿಗೆ ಬೆಂಬಲ ಘೋಷಿಸಿರುವುದು ಅದಕ್ಕೆ ದೊಡ್ಡ ಬೂಸ್ಟ್ ಸಿಕ್ಕಂತೆ.

ಬಹುಮತದ ಕೊರತೆಯಿಲ್ಲದಿರುವಾಗಲೂ ಬಿಜೆಪಿ ಯಾಕೆ ಇಷ್ಟೊಂದು ಸರ್ಕಸ್ ಮಾಡುತ್ತಿದೆ? ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿಪಕ್ಷ ಕಾಂಗ್ರೆಸ್ ಸೇರಿದಂತೆ ಯುಪಿಎ ಮೈತ್ರಿಕೂಟಕ್ಕೆ ಮುಖಭಂಗ ಮಾಡುವುದು ಬಿಜೆಪಿ ಉದ್ದೇಶವಿರಬಹುದು. ವಿಪಕ್ಷಗಳಿಗೆ ಯಾವುದೇ ಬಲವಿಲ್ಲ ಎಂದು ಸಾಬೀತುಪಡಿಸಲು ಬಿಜೆಪಿ ಹೊಂಚು ಹಾಕಿದೆ.

ಇಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಮತ ಸೋತರೆ ವಿಪಕ್ಷಗಳಿಗೆ ಮುಖಭಂಗವಾಗಲಿದೆ. ಅದೇ ಕಾರಣಕ್ಕೆ ಬಿಜೆಪಿ ಆದಷ್ಟು ತನ್ನ ಮಿತ್ರ ಪಕ್ಷಗಳನ್ನು ಸೆಳೆದುಕೊಳ್ಳುವ ಯತ್ನ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ