ಇಂಡೋ-ಬಾಂಗ್ಲಾ ಗಡಿ ಬಂದ್‌ಗೆ ಸರಕಾರ ಮೊದಲ ಆದ್ಯತೆ: ಸೋನೋವಾಲ್
ಶನಿವಾರ, 21 ಮೇ 2016 (14:53 IST)
ಆಸ್ಸಾಂ ಗಡಿಯಲ್ಲಿರುವ ಭಾರತ ಮತ್ತು ಬಾಂಗ್ಲಾ ದೇಶ ಗಡಿಯನ್ನು ಎರಡು ವರ್ಷದೊಳಗೆ ಬಂದ್ ಮಾಡಲಾಗುವುದು ಎಂದು ಭಾವಿ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಹೇಳಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿದ ಸೋನೋವಾಲ್, ಬಾಂಗ್ಲಾ ವಲಸಿಗರನ್ನು ತಡೆಯುವುದೇ ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಆಸ್ಸಾಂ ಗಡಿಯನ್ನು ಬಂದ್ ಮಾಡಲು ಎರಡು ವರ್ಷದ ಸಮಯದ ಗಡುವು ನೀಡಿದ್ದಾರೆ. ಎರಡು ವರ್ಷದೊಳಗಾಗಿ ಬಾಂಗ್ಲಾ ವಲಸಿಗರನ್ನು ಸಂಪೂರ್ಣವಾಗಿ ತಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇಂಡೋ-ಬಾಂಗ್ಲಾದೇಶ ಗಡಿಯನ್ನು ಯಾವ ರೀತಿ ಸೀಲ್ ಮಾಡಲಾಗುವುದು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸೋನೋವಾಲ್, ಶೀಘ್ರದಲ್ಲಿಯೇ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.