ದಲಿತ ಪದಬಳಕೆಗೆ ಬ್ರೇಕ್; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋಟ್ ಮೊರೆ ಹೋದ ಕೇಂದ್ರ ಸಚಿವ

ಗುರುವಾರ, 6 ಸೆಪ್ಟಂಬರ್ 2018 (13:45 IST)
ನವದೆಹಲಿ : 'ದಲಿತ' ಎಂಬ ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿರುವ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸುಪ್ರೀಂ ಕೋರ್ಟ್ ಮೊರೆಹೋಗಲು ನಿರ್ಧಾರ ಮಾಡಿದ್ದಾರೆ.


'ದಲಿತ' ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದಪ್ರಯೋಗ ಮಾಡುವಂತೆ ಸರ್ಕಾರ ಸೂಚಿಸಿತ್ತು. ಪರಿಶಿಷ್ಠ ಜಾತಿ ಎಂಬುದು ಸಾಂವಿಧಾನಿಕ ಪದವಾಗಿದ್ದು, ಪ್ರಮಾಣಪತ್ರ ಮತ್ತು ಇನ್ನಿತರೆ ದಾಖಲೆಗಳಲ್ಲೂ ಅದನ್ನೇ ಬಳಸಿ ಎಂದೂ ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಸೂಚನೆ ನೀಡಿತ್ತು.


ಆದರೆ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವ ಅಠಾವಳೆ,’ ನಾವು ಕೋರ್ಟಿನ ನಿರ್ಧಾರಕ್ಕೆ ಗೌರವ ಕೊಡುತ್ತೇವೆ. ನಮ್ಮ ಸಚಿವಾಲಯವೂ ಈ ಪದಬಳಕೆಗೆ ಕಡಿವಾಣ ಹಾಕಿದೆ. ಆದರೆ ದಾಖಲೆಗಳಲ್ಲಿ ಈಗಾಗಲೇ ದಲಿತ ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದಪ್ರಯೋಗ ಮಾಡಲಾಗುತ್ತಿದೆ. ಮಾಧ್ಯಮಗಳು ಆ ಪದವನ್ನು ಬಳಸದಂತೆ ಕಡಿವಾಣ ಹಾಕುವುದು ಸರಿ ಎಂದು ನನಗನ್ನಿಸುವುದಿಲ್ಲ. ಆದ್ದರಿಂದ ಬಾಂಬೆ ಹೈಕೋರ್ಟ್ ನ ಆದೇಶ ವಿರೋಧಿಸಿ ನಾನು ಸುಪ್ರೀಂ ಕೋರ್ಟ್ ಮೊರೆಹೋಗುತ್ತೇನೆ" ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ