ಆಂಬ್ಯುಲೆನ್ಸ್ ನಲ್ಲಿ ತೆರಳಿದ ವಧು-ವರ: ಮುಂದೆ ಆಗಿದ್ದೇ ಬೇರೆ!
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವರ ಮತ್ತು ಆತನ ನವವಧುವನ್ನು ಕೂರಿಸಿಕೊಂಡು ಆಂಬ್ಯುಲೆನ್ಸ್ ಚಾಲಕನೊಬ್ಬ ಮದುವೆ ಮನೆಗೆ ಹೋಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ತುರ್ತು ಸೇವೆಯ ವಾಹವನ್ನು ಈ ರೀತಿ ದುರ್ಬಳಕೆ ಮಾಡಿರುವುದರ ವಿರುದ್ಧ ಈಗ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ವಾಹನ ಚಾಲಕನ ಪರವಾನಗಿಯನ್ನೇ ರದ್ದುಗೊಳಿಸಲು ಮುಂದಾಗಿದ್ದಾರೆ. ಆದರೆ ತಾನು ವಧು-ವರರನ್ನು ಮುಂದಿನ ಸೀಟ್ ನಲ್ಲಿ ಕೂರಿಸಿಕೊಂಡಿದ್ದೆ. ಆಂಬ್ಯುಲೆನ್ಸ್ ನ ಸೈರನ್ ಹಾಕಿರಲಿಲ್ಲ ಎಂದು ಚಾಲಕ ವಾದಿಸುತ್ತಿದ್ದಾನೆ. ಆದರೆ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.