ತನ್ನ ಹೆಂಡತಿ ಜೊತೆ ಲಲ್ಲೆ ಆಡುತ್ತಿದ್ದ ಅನುಮಾನ: ತಮ್ಮನ ಕೊಂದ ಅಣ್ಣ

ಶುಕ್ರವಾರ, 30 ಸೆಪ್ಟಂಬರ್ 2022 (08:30 IST)
ಕಾನ್ಪುರ: ತನ್ನ ಹೆಂಡತಿ ಜೊತೆ ತಮ್ಮನಿಗೆ ಅಕ್ರಮ ಸಂಬಂಧವಿದೆಯೆಂದು ಅನುಮಾನಿಸಿ ಅಣ್ಣ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 10 ರಂದೇ ಈ ಘಟನೆ ನಡೆದಿತ್ತು. ಆದರೆ ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.

ತಮ್ಮ ನಿದ್ರಿಸುತ್ತಿದ್ದಾಗ ಆತನಿಗೆ ಹೊಡೆದು ಅಣ್ಣ ಕೊಲೆ ಮಾಡಿದ್ದ. ಬಳಿಕ ರಕ್ತಸಿಕ್ತ ಬಟ್ಟೆ ಬದಲಾಯಿಸಿ ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ