ಬಜೆಟ್2019: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ, 5 ಜುಲೈ 2019 (08:53 IST)
ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.



ಇಂದು(ಜುಲೈ 5) ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ. ನೂತನ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿರುವುದರಿಂದ ಮಧ್ಯಮ ವರ್ಗ ಹಾಗೂ ಮಹಿಳೆಯರ ನಿರೀಕ್ಷೆ ಜಾಸ್ತಿ ಇದೆ ಎನ್ನಲಾಗಿದೆ.

 

ಇಂದಿನ ಬಜೆಟ್ ನಲ್ಲಿ ನಿರೀಕ್ಷೆಗಳಿದ್ದು, ಪ್ರಮುಖವಾಗಿ ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ದ ಈಡೇರಿಕೆಗೆ ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗಾಗಿ ಸೇನಾಪಡೆಗಳ ಆಧುನೀಕರಣ, ಬಲವರ್ಧನೆಗೆ ಹೆಚ್ಚಿನ ಆದ್ಯತೆ ಇದೆ. 45 ವರ್ಷಗಳಲ್ಲೇ ಹೆಚ್ಚಾಗಿರುವ ನಿರುದ್ಯೋಗ, ಬಡತನಕ್ಕೆ ಪರಿಹಾರ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಅನುದಾನ ಘೋಷಣೆ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.

*ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ಧನ ಘೋಷಣೆ. ಮುಂದಿನ 3 ವರ್ಷಕ್ಕೆ ರೂ.10 ಸಾವಿರ ಕೋಟಿ ಮೀಸಲು

*ಪ್ರಧಾನ ಮಂತ್ರಿ ಕರ್ಮಯೋಗಿ ಮಾನ್ ಸನ್ಮಾನ್ ಸ್ಕೀಮ್ ಜಾರಿ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ ಸ್ಕೀಮ್

*  ಭಾರತದಲ್ಲಿ ಎಫ್ ಡಿಐ ಹೂಡಿಕೆದಾರರನ್ನ ಆಕರ್ಷಿಸಲು ವಿಮೆ ಕ್ಷೇತ್ರದಲ್ಲಿ ಶೇ.100ರಷ್ಟು  ಎಫ್ ಡಿಐ ಹೂಡಿಕೆಗೆ ಅನುಮತಿ

*ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರೂ.26 ಸಾವಿರ ಕೋಟಿ ಅನುದಾನ

*ಗಾಂವ್, ಗರೀಬ್ ಮತ್ತು ಕಿಸಾನ್ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಉಜ್ವಲ ಯೋಜನೆಯಲ್ಲಿ 7.5ಕೋಟಿ ಎಲ್.ಪಿಜಿ ಸೌಕರ್ಯ


*ಶೇ.97ರಷ್ಟು ಗ್ರಾಮಗಳಿಗೆ ಸರ್ವ ಋತು ಸಾರಿಗೆ ಸೌಲಭ್ಯ

*ಮುಂದಿನ 5 ವರ್ಷಗಳಲ್ಲಿ 25 ಸಾವಿರ ಕಿ.ಮೀ ರಸ್ತೆ ನಿರ್ಮಾಣ, 1.25 ಲಕ್ಷ ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು ನಿರ್ಧಾರ

*ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ  ಹೂಡಿಕೆಗೆ ಒತ್ತು
 

*2019-20ರಲ್ಲಿ 80 ಲೈವ್ ಲಿಹುಡ್ ಇನ್ ಕ್ಯುಬೆಟರ್ ನಿರ್ಮಾಣ
 

*ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯ
 

*ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ
 

*ಜೇನು, ಬಿದಿರು,ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50ಸಾವಿರ ಜನರಿಗೆ ಸರ್ಕಾರದ ನೆರವು

*ಗ್ರಾಮೀಣ ಪ್ರದೇಶಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ

*ಪ್ರತಿ ಗ್ರಾಮ ಪಂಚಾಯಿತಿಗೂ ಇಂಟರ್ ನೆಟ್ ವ್ಯವಸ್ಥೆ

*’ಭಾರತೀಯ ಡಿಜಿಟಲ್ ಸಾಕ್ಷರತೆ’ ಯೋಜನೆ ಜಾರಿ

*ಸ್ವಚ್ಚ ಭಾರತ್ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ, 3 ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚಮುಕ್ತ

*ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು, ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ

* ಜಲಸಂವರ್ಧನೆ, ಕುಡುಯುವ ನೀರು ಯೋಜನೆಗೆ ಆದ್ಯತೆ, ’ಹರ್ ಘರ್ ಜಲ್’ ಮೂಲಕ ಎಲ್ಲರಿಗೂ ಕುಡಿಯೋ ನೀರು ಪೂರೈಕೆ

 *ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಲು ನಿರ್ಧಾರ

*ಭಾರತದ 3 ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ , ಐಐಟಿ, ಐಐಎಂ, ಐಐಎಸ್ ಸಿ ಸಂಸ್ಥೆಗಳಿಗೆ ರೂ.400 ಕೋಟಿ ಅನುದಾನ

*ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ಸ್ಥಾಪನೆಗೆ ನಿರ್ಧಾರ

*10 ಲಕ್ಷ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ

*ಸ್ಟ್ಯಾಂಡ್ ಅಪ್ ಯೋಜನೆಗಳಲ್ಲಿ 2 ವರ್ಷದಲ್ಲಿ 300 ಉದ್ಯಮ ಸ್ಥಾಪನೆ

*60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ 3 ಸಾವಿರ ರೂ.ಪೆನ್ಷನ್

*ಎಲ್ ಇಡಿ ಬಳಕೆಗೆ ಉತ್ತೇಜನ ನೀಡಲು 60 ಕೋಟಿ ಬಲ್ಬ್ ವಿತರಣೆ

*ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿಸಲು ಕ್ರಮ

*ಮಹಿಳಾ ಸ್ವಸಹಾಯ ಸಂಘದ ಒಬ್ಬ ಮಹಿಳೆಗೆ ‘ಒಡಿ’, ಜನ್ ಧನ್ ಅಕೌಂಟ್ ನಿಂದ 5 ಸಾವಿರ ಒಡಿ ನೀಡಲು ನಿರ್ಧಾರ

*ಮಹಿಳೆಯರಿಗೆ ಮುದ್ರಾ ಯೋಜನೆಯಡಿ 1ಲಕ್ಷ ರೂ. ಸಾಲ ಸೌಲಭ್ಯ

*ಎನ್ ಆರ್ ಐಗಳಿಗೆ ಆಧಾರ್ ಆಧಾರಿತ ಪಾಸ್ ಪೋರ್ಟ್ ನೀಡಲು ನಿರ್ಧಾರ

*ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪನೆ

*ಬ್ಯಾಂಕ್ ಗಳ ಏಕೀಕರಣಕ್ಕೆ ಹೆಚ್ಚಿನ ಒತ್ತು, ಬ್ಯಾಂಕುಗಳ 1 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿ ರಿಕವರಿ

*ಸಾರ್ವಜನಿಕ ರಂಗದ ಬ್ಯಾಂಕ್ ಗಳಿಗೆ 70 ಸಾವಿರ ಕೋಟಿ ಹಣ ಮರುಪೂರಣ

*ಅಟಲ್ ಪೆನ್ಷನ್, ನ್ಯಾಷನಲ್ ಪೆನ್ಷನ್ ಯೋಜನೆ ಪಿಎಫ್ ಆರ್ ಡಿಐ ಜತೆ ಜೋಡಿಕೆ

*ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಕ್ಕೆ ರೂ.100ಲಕ್ಷ ಕೋಟಿ

*ಸರ್ಕಾರದ ಬಂಡವಾಳ ಹಿಂತೆಗೆತ ನೀತಿ ಬದಲಾವಣೆ, ಅಗತ್ಯ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಶೇ.51ರಷ್ಟು ಹೂಡಿಕೆ

*ಏರ್ ಇಂಡಿಯಾದಲ್ಲಿ ಹೂಡಿಕೆ ಹಿಂಪಡೆಯಲು ನಿರ್ಧಾರ  

*ಒಟ್ಟು ಜಿಡಿಪಿಯ ಶೇ.5ರಷ್ಟು ಮಾತ್ರ ವಿದೇಶಿ ಸಾಲ

*ನೇರ ತೆರಿಗೆ 11 ಲಕ್ಷ ಕೋಟಿಗೆ ಏರಿಕೆಯಾಗಿದೆ

*5 ಲಕ್ಷ ಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ

*ವಾರ್ಷಿಕ ಆದಾಯ 400 ಕೋಟಿ ಹೊಂದಿದ ಉದ್ಯಮಕ್ಕೆ ಶೇ.25ರಷ್ಟು ತೆರಿಗೆ

*ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪೆನಿಗಳಿಗೆ ಜಿಎಸ್ ಟಿ ಶೇ.5ಕ್ಕೆ ಇಳಿಕೆ  

* ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ 1.25 ಲಕ್ಷದವರೆಗೆ ಸಬ್ಸಿಡಿ, 10 ಲಕ್ಷ  ಮೌಲ್ಯದ ವಾಹನಗಳ ಖರೀದಿಗೆ ರೂ.1.25 ಲಕ್ಷ ಸಬ್ಸಿಡಿ


*ಮಧ್ಯಮ ವರ್ಗದವರಿಗೆ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ, 7 ಲಕ್ಷದವರೆಗಿನ ಸಾಲಕ್ಕೆ 15 ವರ್ಷ ತೆರಿಗೆ ವಿನಾಯಿತಿ

*ತೆರಿಗೆ ಪಾವತಿಗೆ ಪಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್

* 1,2, 5, 10 ಮತ್ತು 20 ರೂ. ಮುಖಬೆಲೆಯ ಹೊಸ ನಾಣ್ಯಗಳ ಬಿಡುಗಡೆ

*ಡಿಜಿಟಲ್ ಪೇಮೆಂಟ್ ಗಳಿಗೆ ಸರ್ಕಾರದಿಂದ ಆದ್ಯತೆ, 1 ಬ್ಯಾಂಕ್ ಅಕೌಂಟ್ ನಿಂದ 1ಕೋಟಿ 1 ವರ್ಷಕ್ಕೆ ಡ್ರಾ ಮಾಡಿದ್ರೆ ಟಿಡಿಎಸ್

*ಜಿಎಸ್ ಟಿ ಯಿಂದ 17 ತೆರಿಗೆಗಳು, 30 ನೀತಿಗಳು ರದ್ದಾಗಿವೆ

* ರೂ 2-5ಕೋಟಿ ಶೇ.3, ರೂ 5-10 ಕೋಟಿ ಆದಾಯಕ್ಕೆ  ಶೇ.7 ರಷ್ಟು ಸರ್ ಚಾರ್ಜ್

*2020ರ ವೇಳೆಗೆ ಭೌತಿಕ ರಸೀದಿಗಳು ರದ್ದು, ವಿದ್ಯುನ್ಮಾನ ರಸೀದಿ ನೀಡಲು ಕಟ್ಟುನಿಟ್ಟಿನ ಕ್ರಮ

*ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ರದ್ದು
 

*ವಿದೇಶದಿಂದ ಆಮದಾಗುವ ಪುಸ್ತಕಗಳಿಗೆ ಶೇ.5ರಷ್ಟು ತೆರಿಗೆ

*ಶಸ್ತ್ರಾಚಿಕಿತ್ಸಾ ಉಪಕರಣಗಳಿಗೆ ತೆರಿಗೆ ವಿನಾಯಿತಿ

*ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ

*ಬಂಗಾರದ ಮೇಲಿನ ಆಮದು ಸುಂಕ ಶೇ.10ರಿಂದ 12.05ಕ್ಕೆ ಏರಿಕೆ

*ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಗೆ 1 ರೂ. ಸೆಸ್ ಏರಿಕೆ
















 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ