ಪರಿಚಯವಿಲ್ಲದ ಮಹಿಳೆಯನ್ನು ಡಾರ್ಲಿಂಗ್ ಅಂತ ಕರೆದರೆ ಶಿಕ್ಷೆ ಗ್ಯಾರಂಟಿ

Krishnaveni K

ಸೋಮವಾರ, 4 ಮಾರ್ಚ್ 2024 (10:15 IST)
File photo
ಕೋಲ್ಕೊತ್ತಾ: ಪರಿಚಯವಿಲ್ಲದ ಮಹಿಳೆಯನ್ನು ಇನ್ನು ಮುಂದೆ ಡಾರ್ಲಿಂಗ್ ಎಂದು ಕರೆದರೆ ನಿಮಗೆ ಕಾನೂನು ಪ್ರಕಾರ ಶಿಕ್ಷೆಯಾಗುವುದು ಗ್ಯಾರಂಟಿ. ಇಂತಹದ್ದೊಂದು ಮಹತ್ವದ ಆದೇಶವನ್ನು ಕೋಲ್ಕತ್ತಾ ಹೈಕೋರ್ಟ್ ನೀಡಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯ್ ಸೇನ್ ಗುಪ್ತಾ ನೇತೃತ್ವದ ಪೀಠ ಇಂತಹದ್ದೊಂದು ತೀರ್ಪು ನೀಡಿದೆ. ಪರಿಚಯವಿಲ್ಲದ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವುದು ಲೈಂಗಿಕ ಶೋಷಣೆಗೆ ಸಮನಾಗಲಿದೆ. ಇದಕ್ಕೆ ಸೆಕ್ಷನ್ 354ಎ(ಐ) ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ತೀರ್ಪಿತ್ತಿದೆ.

ಕುಡಿದ ಮತ್ತಿನಲ್ಲಿ ಆರೋಪಿ ಜನಕ್ ರಾಮ್ ಎಂಬಾತ ಮಹಿಳಾ ಪೊಲೀಸ್ ಪೇದೆಗೆ ‘ಡಾರ್ಲಿಂಗ್’ ಎಂದು ಕರೆದಿದ್ದ. ಇದರ ವಿರುದ್ಧ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ‘ಯಾವುದೇ ವ್ಯಕ್ತಿ ಕುಡಿದ ಮತ್ತಿನಲ್ಲಿರಲಿ, ನಾರ್ಮಲ್ ಆಗಿರುವಾಗ ಇರಲಿ, ಅಪರಿಚಿತ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯವುದು ಲೈಂಗಿಕ ಶೋಷಣೆಗೆ ಸಮನಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಕೋರ್ಟ್ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಆರೋಪಿ ಜನಕ್ ರಾಮ್ ಗೆ ಕೋರ್ಟ್ ಮೂರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಮತ್ತು 500 ರೂ. ದಂಡ ಪಾವತಿಸಲು ಸೂಚನೆ ನೀಡಿದೆ. ಕಳೆದ ವರ್ಷ ನವಂಬರ್ ನಲ್ಲಿ ಈ ಪ್ರಕರಣ ದಾಖಲಾಗಿತ್ತು. ಇದೀಗ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ