ಹೆಣ್ಣುಮಕ್ಕಳು ಶಾಲೆಗೆ ತೆರಳುವಂತಿಲ್ಲ!?

ಗುರುವಾರ, 24 ಮಾರ್ಚ್ 2022 (09:11 IST)
ಕಾಬೂಲ್ : ಅಫಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಾಲಿಬಾನಿಗಳು ಮತ್ತೆ ಅಡ್ಡಿಯಾಗಿದ್ದಾರೆ.

ನಾವು ಆರನೇ ತರಗತಿಯ ನಂತರದ ವಿದ್ಯಾರ್ಥಿನಿಯರು ಸಹ ಶಾಲೆಗೆ ತೆರಳಲು ಅನುಮತಿ ನೀಡಲಾಗುವುದು ಎಂದು ಮೊದಲು ಘೋಷಿಸಿದ್ದ ತಾಲಿಬಾನಿಗಳು ಈಗ ಉಲ್ಟಾ ಹೊಡೆದಿದ್ದಾರೆ.

''ಆರನೇ ತರಗತಿ ನಂತರದ ವಿದ್ಯಾರ್ಥಿನಿಯರು ಶಾಲೆಗೆ ತೆರಳುವುದರ ನಿಷೇಧ ಮುಂದುವರಿಸುವ ಕುರಿತು ಮಂಗಳವಾರ ರಾತ್ರಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಖಂಡಿತವಾಗಿಯೂ ಇದು ಶಾಶ್ವತ ನಿರ್ಬಂಧ ಅಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಆರಂಭಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು,'' ಎಂದು ತಾಲಿಬಾನ್ ಆಡಳಿತದ ಹಿರಿಯ ಅಧಿಕಾರಿ ವಹೀದುಲ್ಲಾ ಹಶ್ಮಿ ಹೇಳಿದ್ದಾನೆ.

''ಸದ್ಯಕ್ಕಂತೂ ಹೆಣ್ಣುಮಕ್ಕಳು ಶಾಲೆ-ಕಾಲೇಜುಗಳಿಗೆ ತೆರಳುವಂತಿಲ್ಲ. ಅವರಿಗೆ ಅವಕಾಶ ನೀಡಲು ತಾಲಿಬಾನ್ ಉನ್ನತ ಮುಖಂಡರು ಒಪ್ಪಿಗೆ ಸೂಚಿಸುತ್ತಿಲ್ಲ. ಯಾವಾಗ ಮತ್ತು ಹೇಗೆ ಶಾಲೆಗಳನ್ನು ತೆರೆಯಲಾಗುತ್ತದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ,'' ಎಂದು ಮಾಹಿತಿ ನೀಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ