ವಿಚ್ಛೇದನಕ್ಕೆ ಇನ್ಮುಂದೆ ಸುಖಾಸುಮ್ಮನೇ ಗಂಡನ ಪುರುಷತ್ವದ ಕಾರಣ ನೀಡುವಂತಿಲ್ಲ!

ಭಾನುವಾರ, 22 ನವೆಂಬರ್ 2020 (10:22 IST)
ನವದೆಹಲಿ: ವಿವಾಹ ವಿಚ್ಛೇದನ ಸುಲಭವಾಗಿ ಸಿಗಲು ಕೆಲವು ಮಹಿಳೆಯರು ಕೋರ್ಟ್ ಮುಂದೆ ತನ್ನ ಗಂಡನಿಗೆ ಲೈಂಗಿಕ ಸಾಮರ್ಥ್ಯವಿಲ್ಲ ಎಂಬ ಕಾರಣ ನೀಡಿಬಿಡುತ್ತಾರೆ. ಆದರೆ ಇನ್ಮುಂದೆ ಹೀಗೆಲ್ಲಾ ಸುಖಾಸುಮ್ಮನೇ ಕಾರಣ ನೀಡುವಂತಿಲ್ಲ.


ಹೀಗಂತ ಡೆಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಮಹಿಳೆಯೊಬ್ಬರು ತಮ್ಮ ಪತಿ ಮೇಲೆ ಲೈಂಗಿಕ ಅಸಮರ್ಥತೆ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚ್ಛೇದನ ಮಾನ್ಯ ಮಾಡಿರುವ ನ್ಯಾಯಾಲಯ, ಇಂತಹ ಆರೋಪಗಳು ಪುರುಷನ ಮಾನಸಿಕ ಖಿನ್ನತೆಗೆ ಕಾರಣವಾಗಬಹುದು ಮತ್ತು ಗೌರವಕ್ಕೆ ಧಕ್ಕೆ ತರಬಹುದು. ಹೀಗಾಗಿ ಇಂತಹ ವಿಚಾರಗಳನ್ನು ಇನ್ಮುಂದೆ ಈ ರೀತಿ ಬಹಿರಂಗಪಡಿಸಿ ತೇಜೋವಧೆ ಮಾಡುವಂತಿಲ್ಲ ಎಂದು ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ