ಗುವಾಹಟಿ: 'ಪಾಪ ಮಾಡಿದ್ದರೆ ಕ್ಯಾನ್ಸರ್ ಬರುತ್ತದೆ' ಇದನ್ನು ಯಾರೋ ಜ್ಯೋತಿಷಿ ಹೇಳುತ್ತಿದ್ದಾರೆ ಅಂದುಕೊಳ್ಳಬೇಡಿ. ಹೀಗೆ ಹೇಳಿದ್ದು ಅಸ್ಸಾಂನ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಸರ್ಮಾ. ಹೊಸತಾಗಿ ಉದ್ಯೋಗಕ್ಕೆ ಸೇರಿದ ಶಾಲಾಶಿಕ್ಷಕರನ್ನು ಉದ್ದೇಶಿಸಿ ಸಚಿವರು ಮಾತನಾಡಿದ್ದಾರೆ.
ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಪಾಪ. ದೇವರ ನ್ಯಾಯಾಲಯದಲ್ಲಿ ಎಲ್ಲರಿಗೂ ಶಿಕ್ಷೆಯಾಗುತ್ತದೆ. ಈ ಶಿಕ್ಷೆಯ ಫಲವಾಗಿ ಕೆಲವರಿಗೆ ಕ್ಯಾನ್ಸರ್ ಬರುತ್ತದೆ. ಇನ್ನು ಕೆಲವರು ಆಕ್ಸಿಡೆಂಟ್ ಆಗಿ ಸಾಯುತ್ತಾರೆ ಇದೆಲ್ಲವೂ ಅವರವರು ಮಾಡಿದ ಪಾಪದ ಫಲ ಎನ್ನುತ್ತಾರೆ ಸಚಿವ ಹಿಮಾಂತ ಬಿಸ್ವಾ.
ಬಿಸ್ವಾ ಅವರ ಈ ರೀತಿಯ ಹೇಳಿಕೆಯನ್ನು ಎಐಯುಡಿಎಫ್ ವಕ್ತಾರ ಇಮಿನುಲ್ ಇಸ್ಲಾಂ ಖಂಡಿಸಿದ್ದಾರೆ. ತಂತ್ರಜ್ಞಾನದ ಯುಗ ದಲ್ಲಿ ಬಿಸ್ವಾ ಅವರು ಈ ರೀತಿ ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ. ಕೆಲವು ವರ್ಷಗಳ ಹಿಂದೆಯೇ ಸಚಿವರು ಕ್ಯಾನ್ಸರ್ ತಡೆಗಟ್ಟಲು ತಂಬಾಕು ನಿಷೇಧ ಕಾನೂ ತಂದಿದ್ದರು. ಈಗ ಬೇರೊಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ಪೀಡಿತರಿಗೆ ನೋವಾಗುತ್ತದೆ ಎಂದು ಇಮಿನುಲ್ ಇಸ್ಲಾಂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.