ಆಂಕೋಲಜಿ ವಿಭಾಗದ ಮುಖ್ಯಸ್ ಡಾ. ಜಲಾಲುದ್ದೀನ್ ಅಕ್ಬರ್ ಮಾತನಾಡಿ, ನೂತನ ಈ ಸಂಸ್ಥೆಯಲ್ಲಿ ರೇಡಿಯೋಥೆರಪಿ ಮತ್ತು ನ್ಯೂಕ್ಲಿಯರ್ ಮೆಡಿಸನ್ ವಿಭಾಗಗಳನ್ನು ಸೇರ್ಪಡೆಗೊಳಿಸಿದ್ದು, ಚಿಕಿತ್ಸಾ ಸೌಲಭ್ಯಗಳನ್ನು ಸಂಪೂರ್ಣವಾಗಿ ನವೀಕರಿಸುತ್ತಿದೆ. ಜೊತೆಗೆ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡಲು ಬೇಕಾದ ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಟಾಟಾ ಟ್ರಸ್ಟ್ ಅನುದಾನ ನೀಡುವ ಮೂಲಕ ತನ್ನ ಸಹಭಾಗಿತ್ವವನ್ನು ನೀಡಿದೆ. ಈ ನೂತನ ಕೇಂದ್ರವೂ ಸುಮಾರು 36,000 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಆರು ಬಹುಮಹಡಿ ಕಟ್ಟಡವನ್ನು ಹೊಂದಿದೆ. ಎರಡು ರೇಡಿಯೋ ಥೆರಪಿ ಬಂಕರ್‌ಗಳು, ಒಂದು ಬ್ರಾಕಿಥೆರಪಿ ಬಂಕರ್ ಹೊಂದಿದೆ. ಟ್ರೂಭೀಮ್ ರೇಡಿಯೋ ಥೆರಪಿ ಯಂತ್ರವನ್ನು ಕ್ಯಾನ್ಸರ್‌ಗೆ ಬಳಸಲಾಗುತ್ತಿದೆ. ವಿಕಿರಣ ಚಿಕಿತ್ಸೆಗಳಿಗೆ 6 ಡಿಗ್ರಿ ಸ್ವಾತಂತ್ರ್ಯ (6DoF) ಮಂಚವನ್ನು ಹಾಕಲಾಗಿದ್ದು, PET CT ಸ್ಕ್ಯಾನರ್ ಸೇರಿದಂತೆ ಪ್ರತ್ಯೇಕ ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯವನ್ನು ಹೊಂದಿದೆ. ಇದರ ಜೊತೆಗೆ, ಕಿಮೋಥೆರಪಿಯನ್ನು ನಿರ್ವಹಿಸಲು 10 ಹಾಸಿಗೆಗಳ ಡೇ ಕೇರ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಇಡೀ ಯೋಜನೆಯನ್ನು ಅಲಮೇಲು ಚಾರಿಟೇಬಲ್ ಫೌಂಡೇಶನ್ ಮೂಲಕ ಟಾಟಾ ಟ್ರಸ್ಟ್‌ಗಳು ಕಾರ್ಯಗತಗೊಳಿಸಿದೆ. ಈ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದ ಆಂಕೊಲಾಜಿಸ್ಟ್‌ಗಳ ತಂಡದಿಂದ ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ
[email protected]/0824 2246000 ಸಂಪರ್ಕಿಸಬಹುದು.