ಮಗು ಪಡೆದಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಅತ್ತೆ!

ಶುಕ್ರವಾರ, 13 ಮೇ 2022 (10:39 IST)
ತನ್ನ ವಂಶವೃಕ್ಷವನ್ನು ಬೆಳೆಸುವ ಕನಸು ಬಹುತೇಕರದ್ದು, ಆದರೆ ಕೆಲವರಿಗೆ ಈ ಯೋಗ ಇರುವುದಿಲ್ಲ.

ಆದರೆ ಈ ಆಧುನಿಕ ಯುಗದಲ್ಲಿ ಮಕ್ಕಳನ್ನು ಪಡೆಯಲು ಬಹುತೇಕರು ಇಷ್ಟ ಪಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯವೇ. ಈ ಮಧ್ಯೆ ತಾಯಿಯೊಬ್ಬರು ತನ್ನ ಮಗ ಹಾಗೂ ಸೊಸೆಯ ವಿರುದ್ಧ ಮಕ್ಕಳು ಮಾಡಿಕೊಳ್ಳುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಲ್ಲದೇ ಐದು ಕೋಟಿ ಪರಿಹಾರ ನೀಡುವಂತೆ ಅವರು ಆಗ್ರಹಿಸಿದ್ದಾರೆ. ತನ್ನ ವಂಶದ ಅಂತ್ಯವಾಗುತ್ತಿದೆ ಹಾಗೂ ಇದೇ ಕಾರಣಕ್ಕೆ ಜನರು ತನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದುಃಖಿತಳಾಗಿದ್ದು, ಮಗ ಹಾಗೂ ಆತನ ಪತ್ನಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಹರಿದ್ವಾರದ ಜಿಲ್ಲಾ ನ್ಯಾಯಾಲಯದಲ್ಲಿ ಈ ವಿಚಿತ್ರ ಪ್ರಕರಣ ದಾಖಲಾಗಿದೆ. ತಾಯಿಯೊಬ್ಬರು ತನ್ನ ಮಗ ಮತ್ತು ಸೊಸೆ ಮಗು ಮಾಡಿಕೊಳ್ಳದೇ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವರ್ಷದೊಳಗೆ ತನಗೆ ಮೊಮ್ಮಗುವಿನ ಸಂತೋಷವನ್ನು ನೀಡುವಂತೆ ದಂಪತಿಗೆ ನಿರ್ದೇಶನ ನೀಡುವಂತೆ ದೂರುದಾರರು ಕೋರಿದ್ದಾರೆ.

ವಿಫಲವಾದರೆ ದಂಪತಿ ಇವರಿಗೆ 5 ಕೋಟಿ ಪರಿಹಾರ ನೀಡಬೇಕು ಎಂದು ಅವರು ಕೋರ್ಟ್ಗೆ ಮನವಿ ಮಾಡಿದ್ದಾರೆ. ಅಲ್ಲದೇ ತಮ್ಮ ಸೊಸೆಯ ತಂದೆ-ತಾಯಿ ಮತ್ತು ಸಹೋದರರನ್ನು ಸಹ ಈ ಮೊಕದ್ದಮೆಯಲ್ಲಿ ಪಾರ್ಟಿಯಾಗಿ ಸೇರಿಸಲಾಗಿದೆ.

ಮಹಿಳೆಯ ದೂರಿನ ಪ್ರಕಾರ, ಆಕಗೆ ಏಕಮಾತ್ರ ಪುತ್ರನಿದ್ದು, ಆತ ಪ್ರಸ್ತುತ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿದ್ದಾರೆ. ಎಲ್ಲ ತಾಯಿಯಂತೆ ಮಹಿಳೆ ಈ ಮಗನನ್ನು  ತುಂಬಾ ಪ್ರೀತಿಯಿಂದ ಬೆಳೆಸಿದಳು ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಅವನು ಶಿಕ್ಷಣ ಪಡೆಯಲು ಸಹಾಯ ಮಾಡಿದಳು. ನಂತರ 2016ರಲ್ಲಿ ಇವರು ತಮ್ಮ ಪುತ್ರನಿಗೆ ವಿವಾಹವನ್ನು ಮಾಡಿದ್ದರು.

ಮದುವೆಯ ನಂತರ ದಂಪತಿ (ಮಗ ಸೊಸೆ) ಯನ್ನು ಹನಿಮೂನ್ಗಾಗಿ ಥೈಲ್ಯಾಂಡ್ಗೆ ಕಳುಹಿಸಿದ್ದರು. ಅಲ್ಲದೇ ತಮ್ಮ ಮಧುಚಂದ್ರವನ್ನು ಖುಷಿಯಿಂದ ಕಳೆಯಲು ಈ ಮಗ ಸೊಸೆಗೆ ತಾಯಿ ಐದು ಲಕ್ಷ ಹಣವನ್ನು ಕೂಡ ನೀಡಿದ್ದರು. ಅಲ್ಲದೇ ತನ್ನ ಪುತ್ರನನ್ನು ನೋಡಿಕೊಳ್ಳಲು ಸುಮಾರು 2 ಕೋಟಿ ಖರ್ಚು ಮಾಡಿದ್ದಾಗಿ ಈ ಮಹಿಳೆ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ