ಕಾವೇರಿ'ದ' ಕಲಹ: ನೀರು ಬಿಡದಿದ್ದಕ್ಕೆ 2,480 ಕೋಟಿ ಪರಿಹಾರ ಕೇಳಿದ ತಮಿಳುನಾಡು
ಸೋಮವಾರ, 9 ಜನವರಿ 2017 (12:54 IST)
ಜಯಲಲಿತಾ ಸಾವಿನ ಬಳಿಕವೂ ಕಾವೇರಿಗಾಗಿ ಕಲಹವನ್ನು ಮುಂದುವರೆಸಿರುವ ತಮಿಳುನಾಡು ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ನೀರು ಬಿಡದಿದ್ದಕ್ಕೆ ಕರ್ನಾಟಕ 2480 ಕೋಟಿ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದೆ.
ಇಂದು ಮುಂಜಾನೆ ಅಪೆಕ್ಸ್ ಕೋರ್ಟ್ ಉಭಯ ರಾಜ್ಯಗಳಿಗೆ ಒಂದು ವಾರದೊಳಗೆ ಸಾಕ್ಷಿಗಳ ಪಟ್ಟಿಯನ್ನು ಫೈಲ್ ಮಾಡುವಂತೆ ಆದೇಶಿಸಿತ್ತು. ಇದಲ್ಲದೆ, ಸಾಕ್ಷಿಗಳ ಅಫಿಡವಿಟ್ ವಿವರಗಳನ್ನು ನಾಲ್ಕು ವಾರಗಳಲ್ಲಿ ಪಟ್ಟಿ ಮಾಡಬೇಕು ಎಂದು ನ್ಯಾಯಾಲಯದ ಹೇಳಿದೆ.
ಇನ್ನೊಂದೆಡೆ ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಸರ್ಕಾರ ಮನವಿ ಸಲ್ಲಿಸಿತ್ತು. ಆದರೆ ಮಹಾರಾಷ್ಟ್ರ ಮತ್ತು ಕರ್ನಾಟಕ ಮರುಹಂಚಿಕೆ ಅಗತ್ಯವಿಲ್ಲ ಎಂದಿದ್ದವು. ಆದರೆ ಈ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ನ್ಯಾಯಾಧೀಕರಣದ ತೀರ್ಪನ್ನು ಎತ್ತಿ ಹಿಡಿದಿದೆ.
ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ಕರ್ನಾಟಕಕ್ಕೆ ಸುಪ್ರೀಂ ಆದೇಶ ಸ್ವಲ್ಪ ಮಟ್ಟಿನ ನಿರಾಳತೆಯನ್ನು ತಂದಿದೆ. ಆದರೆ ಸುಪ್ರೀಂ ಆದೇಶ ಹಿನ್ನಡೆಯನ್ನು ಕಂಡಿರುವ ತೆಲಂಗಾಣ ಮತ್ತೆ ಯಾವ ರೀತಿಯಲ್ಲಿ ಕಾನೂನು ಹೋರಾಟಕ್ಕೆ ಇಳಿಯಬಹುದು ಎಂಬುದನ್ನು ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ