ಬಿಜೆಪಿಯಿಂದ ಅ.7ರಂದು ಸಂಭ್ರಮಾಚರಣೆ

ಸೋಮವಾರ, 4 ಅಕ್ಟೋಬರ್ 2021 (08:49 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಕಚೇರಿಗಳಲ್ಲಿ ಅಧಿಕಾರಕ್ಕೆ ಬಂದು ನಿರಂತರ 20 ವರ್ಷ ಪೂರೈಸಿದ ಪ್ರಯುಕ್ತ ಬಿಜೆಪಿ ಅಕ್ಟೋಬರ್ 7ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಎರಡನೇ ಅವಧಿಗೆ ಪ್ರಧಾನಿಯಾಗಿ ಎರಡು ವರ್ಷ ಕಳೆಯುವವರೆಗೂ ಒಟ್ಟಾರೆ 20 ವರ್ಷಗಳ ಕಾಲ ನಿರಂತರ ಅಧಿಕಾರದಲ್ಲಿದ್ದಾರೆ ಮೋದಿ.
"ನದಿಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ಸಂಭ್ರಮಾಚರಣೆ ಆರಂಭಿಸುವ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಬೂತ್ ಮಟ್ಟದಿಂದಲೂ ದೇಶಾದ್ಯಂತ ಈ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ," ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ನದಿ ಸ್ವಚ್ಛತಾ ಕಾರ್ಯಕ್ರಮ ಇಟ್ಟುಕೊಂಡಿದ್ದು, ಶಾಸಕರು ಹಾಗೂ ಸಂಸದರು ತಂತಮ್ಮ ಕ್ಷೇತ್ರಗಳಲ್ಲಿ ಈ ಕೆಲಸ ಆಗುವುದನ್ನು ಖಾತ್ರಿ ಪಡಿಸಲಿದ್ದಾರೆ.
ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅಕ್ಟೋಬರ್ 7ರಂದು ಕೇದಾರನಾಥ ದೇಗುಲಕ್ಕೆ ಭೇಟಿ ನೀಡಲಿದ್ದು, 2019ರ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಮೆಚ್ಚಿನ ಕ್ಷೇತ್ರಕ್ಕೆ ತೆರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ