ನವದೆಹಲಿ : ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 2200 ವಿದೇಶಿ ಜಮಾತ್ ಸದಸ್ಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ಕಾಲ ಭಾರತ ಪ್ರವೇಶವನ್ನು ನಿಷೇಧಿಸಿದೆ.
ಭಾರತದ್ಯಾಂತ ಕೊರೊನಾ ಹೆಚ್ಚಾಗಿ ಹರಡಲು ಕಾರಣವಾದ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾರತದಿಂದ ಮಾತ್ರವಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದ ಇವರು ನಿಯಮ ಮೀರಿ ಸಭೆಯಲ್ಲಿ ಭಾಗಿಯಾಗಿದ್ದರು.
ಆದಕಾರಣ ಕೇಂದ್ರ ಗೃಹ ಇಲಾಖೆ ಇವರು 10 ವರ್ಷ ಭಾರತಕ್ಕೆ ಆಗಮಿಸದಂತೆ ನಿಷೇಧ ಹೇರಿದೆ. ಇದರಲ್ಲಿ 2200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿದ್ದು, ಇವರಲ್ಲಿ ಹೆಚ್ಚಿನವರು ಇಂಡೋನೇಷ್ಯಾಗೆ ಸೇರಿದವರು ಎಂಬುದಾಗಿ ತಿಳಿದುಬಂದಿದೆ.