ನೀವು ಹಾಕಿದ ಮತ ಯಾರಿಗೆ ಹೋಗಿದೆ ಎಂದು ಸ್ಥಳದಲ್ಲೇ ಖಚಿತಪಡಿಸಿಕೊಳ್ಳಬಹುದು.. ವಿವಿಪ್ಯಾಟ್ ಮೆಶಿನ್`ಗಳಿಗೆ ಕೇಂದ್ರ ಸಂಪುಟ ಅಸ್ತು

ಬುಧವಾರ, 19 ಏಪ್ರಿಲ್ 2017 (18:48 IST)
ದೇಶಾದ್ಯಂತ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್`ಗಳ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ವಿವಿಪ್ಯಾಟ ಅಳವಡಿಕೆಗೆ ಚುನಾವಣಾ ಆಯೋಗ ಮುಂದಾಗಿದ್ದು, ಇದಕ್ಕೆ ಕೇಂದ್ರ ಅಸ್ತು ಎಂದಿದೆ. ಉತ್ತರಪ್ರದೇಶ ಚುನಾವಣೆ ಬಳಿಕ ಮಾಯಾವತಿ, ಕೇಜ್ರಿವಾ್ದರೂ ಕೆಲ ಕ಻ಂಗ್ರೆಸ್ ಲ್ ಿವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್`ನಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಇವಿಎಂ ಪರಿಚಯವಾಗಿದ್ದರೂ ಕೆಲ ಕಾಂಗ್ರೆಸ್ ನಾಯಕರೇ ಇವಿಎಂ ವಿರುದ್ಧ ಧ್ವನಿ ಎತ್ತಿದ್ದರು.

ಇದೀಗ, ದೇಶಾದ್ಯಂತ ಇವಿಎಂ ಜೊತೆ 16 ಲಕ್ಷ ವಿವಿಪ್ಯಾಟ್ ಮೆಶಿನ್ ಅಳವಡಿಕೆಗೆ ಚುನಾವಣಾ ಆಯೋಗ ಸಲ್ಲಿಸಿದ್ದ 3174 ಕೋಟಿ ರೂ. ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ  ಗ್ರೀನ್ ಸಿಗ್ನಲ್ ನೀಡಿದೆ.

ಏನಿದು ವಿವಿಪ್ಯಾಟ್..?: ವಿವಿಪ್ಯಾಟ್ ಇವಿಎಂಗೆ ಸಂಪರ್ಕ ಹೊಂದಿರುವ ಮೆಶಿನ್. ನೀವು ವೋಟ್ ಹಾಕಿದ ಬಳಿಕ ಯಾರಿಗೆ ತಮ್ಮ ಮತ ಹೋಗಿದೆ ಎಂಬುದನ್ನ ಇದರಿಂದ ತಿಳಿಯಬಹುದಾಗಿದೆ. ಇವಿಎಂನಲ್ಲಿ ನೀವು ಬಟನ್ ಒತ್ತಿದ ೆ. ವಿವಿಪ್ಯಾಟ್ ಮೆಶೀನ್`ನಲ್ಲಿ ಒಂದು ಚೀಟಿ ಮುದ್ರಿತವಾಗಿ ಪಾರದರ್ಶಕ ಪರದೆ ಮೇಲೆ ಕಾಣುತ್ತದೆ. ಇದರಲ್ಲಿ ನೀವೂ ವೋಟ್ ಹಾಕಿದ ವ್ಯಕ್ತಿಯ ಹೆಸರು, ಚಿಹ್ನೆ ಎಲ್ಲವೂ ಕಾಣುತ್ತದೆ. 7 ಸೆಕೆಂಡುಗಳಲ್ಲಿ ನಿಮ್ಮ ವೋಟು ಯಾರಿಗೆ ಹೋಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳಬಹುದಾಗಿದೆ. ಬಳಿಕ ಡ್ರಾಪ್ ಬಾಕ್ಸ್`ಗೆ ಚೀಟಿ ಸೇರುತ್ತದೆ. ಗೌಪ್ಯ ಮತದಾನದ ದೃಷ್ಟಿಯಿಂದ ಮತದಾರರಿಗೆ ಚೀಟಿ ಕೊಡುವುದಿಲ್ಲ. ಚುನಾವಣಾ ಅಧಿಕಾರಿಗಳು ಮಾತ್ರ ಅದನ್ನ ತೆರೆಯಬಹುದಾಗಿದೆ.

ವೆಬ್ದುನಿಯಾವನ್ನು ಓದಿ