GST ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಬುಧವಾರ, 14 ಜೂನ್ 2023 (14:49 IST)
ನವದೆಹಲಿ : ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶದ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಸರಕು ಮತ್ತು ಸೇವಾ ತೆರಿಗೆ ಪಾಲನ್ನು ಸೇರಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
 
ತಿಂಗಳಿಗೆ 59,140 ಕೋಟಿ ರೂ. ನೀಡಬೇಕಿದ್ದ ಕೇಂದ್ರ ಸರ್ಕಾರ ಈ ಬಾರಿ 1,18,280 ಕೋಟಿ ರೂ. ಹಣವನ್ನು ಸೋಮವಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಿದೆ.

ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ಕೋಟಿ ರೂ. ಪೈಕಿ ಕರ್ನಾಟಕ ಕ್ಕೆ 4,314 ಕೋಟಿ ರೂ. ಬಿಡುಗಡೆ ಮಾಡಿದೆ. ಮಹಾರಾಷ್ಟ್ರಕ್ಕೆ 7,472 ಕೋಟಿ ರೂ. ಬಿಡುಗಡೆಯಾಗಿದ್ದು ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ.

ಜಿಎಸ್ಟಿ ಪಾಲಿನಲ್ಲಿ ಉತ್ತರಪ್ರದೇಶಕ್ಕೆ ದೊಡ್ಡ ಪಾಲು ದೊರಕಿದೆ. ಉತ್ತರ ಪ್ರದೇಶಕ್ಕೆ 21,218 ಕೋಟಿ ರೂ. ಬಿಡುಗಡೆಯಾಗಿದ್ದು, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಿಗೆ 8,000 ಕೋಟಿ ರೂ.ಗಿಂತ ಹೆಚ್ಚು ಜಿಎಸ್ಟಿ ಪಾಲು ಜೂನ್ ತಿಂಗಳಲ್ಲಿ ಸಿಕ್ಕಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ