ಕಾಂಡೋಮ್ ವಿಚಾರದಲ್ಲಿ ಸಲ್ಮಾನ್ ಹಾದಿಯಲ್ಲೇ ನಡೆಯಿತು ಕೇಂದ್ರ

ಬುಧವಾರ, 13 ಡಿಸೆಂಬರ್ 2017 (08:10 IST)
ನವದೆಹಲಿ: ಇತ್ತೀಚೆಗೆ ಕಾಂಡೋಮ್ ಜಾಹೀರಾತುಗಳು ಎಗ್ಗಿಲ್ಲದೇ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದೆ. ಇದರಿಂದ ಮಕ್ಕಳೆದುರು ಟಿವಿ ನೋಡಲು ಮುಜುಗರವಾಗುತ್ತಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ.
 

ಕೇಂದ್ರ ಸರ್ಕಾರ ಎಲ್ಲಾ ದೂರದರ್ಶನ ವಾಹಿನಿಗಳಿಗೆ ಕಾಂಡೋಮ್ ಜಾಹೀರಾತು ಪ್ರಸಾರ ಮಾಡಲು ಸಮಯ ನಿಗದಿಪಡಿಸಿದೆ. ಇನ್ಮುಂದೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ಕಾಂಡೋಮ್ ಜಾಹೀರಾತುಗಳು ಪ್ರಸಾರ ಮಾಡಬೇಕೆಂದು ಕೇಂದ್ರ ನಿರ್ದೇಶನ ನೀಡಿದೆ.

ಕೇಂದ್ರದ ಈ ನಿರ್ಧಾರ ಸ್ವಾಗತಾರ್ಹ. ಯಾಕೆಂದರೆ ಟಿವಿ ವಾಹಿನಿ ನೋಡುವಾಗ ಕುಟುಂಬ ಸಮೇತರಾಗಿ ನೋಡುತ್ತೇವೆ. ಮಕ್ಕಳು ನೋಡುವಾಗ ಇಂತಹ ಅಸಭ್ಯ ಜಾಹೀರಾತುಗಳಿದ್ದರೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತದೆ.

ಇತ್ತೀಚೆಗೆ ಸಲ್ಮಾನ್ ಖಾನ್ ತಾವು ನಡೆಸಿಕೊಡುವ ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋನಲ್ಲಿ ಬಿಪಾಶಾ ಬಸು ಮತ್ತು ಆಕೆಯ ಪತಿ ಕರಣ್ ಸಿಂಗ್ ನಟಿಸಿರುವ ಕಾಂಡೋಮ್ ಜಾಹೀರಾತಿಗೆ ಕತ್ತರಿ ಹಾಕಿದ್ದರು.  ಆಗಲೂ ಸಲ್ಮಾನ್ ಇದೇ ಕಾರಣ ನೀಡಿದ್ದರು.

ಕೆಲವು ತಿಂಗಳುಗಳ ಹಿಂದೆ ಗೋವಾ ಸಾರಿಗೆ ಸಂಸ್ಥೆಯಲ್ಲೂ ಸನ್ನಿ ಲಿಯೋನ್ ನಟಿಸಿದ್ದ ಕಾಂಡೋಮ್ ಜಾಹೀರಾತುಗಳು ಪ್ರಯಾಣಿಕರಿಗೆ ಮುಜುಗರವುಂಟು ಮಾಡುತ್ತಿದೆ ಎಂಬ ದೂರುಗಳು ಕೇಳಿಬಂದಿತ್ತು.

ಸೆಕ್ಸ್ ವಿಚಾರದಲ್ಲಿ ನಾವು ಮುಕ್ತರಾಗಬೇಕು ನಿಜ. ಆದರೆ ಅದು ಅಪ್ರಾಪ್ತರ ಮುಂದೆ ಮುಜುಗರವಾಗುವಂತೆ ಇರಬಾರದು. ಎಲ್ಲಿ, ಯಾವಾಗ ಪ್ರಸಾರ ಮಾಡಬೇಕು ಎಂಬ ಬದ್ಧತೆ ನಮಗಿರಬೇಕು. ಆ ಹಿನ್ನಲೆಯಲ್ಲಿ ಕೇಂದ್ರ ದೂರದರ್ಶನದಲ್ಲಿ ಮಾತ್ರವಲ್ಲ, ಖಾಸಗಿ ವಾಹಿನಿ, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಿಗೂ ಕಡಿವಾಣ ಹಾಕಿದರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ