ಚುನಾವಣೆಗೆ ಒಟ್ಟಿಗಿದ್ದೆವು, ಕೇಂದ್ರದಲ್ಲೂ ಎನ್ ಡಿಎ ಜೊತೆಗೇ ಇರ್ತೇವೆ: ಚಂದ್ರಬಾಬು ನಾಯ್ಡು

Krishnaveni K

ಬುಧವಾರ, 5 ಜೂನ್ 2024 (11:10 IST)
ಹೈದರಾಬಾದ್: ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಜೊತೆಗೇ ಎದುರಿಸಿದ್ದೆವು. ಇದೀಗ ಫಲಿತಾಂಶದ ಬಳಿಕವೂ ಎನ್ ಡಿಎ ಜೊತೆಗೇ ಇರುತ್ತೇವೆ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಇಂದು ದೆಹಲಿಗೆ ತೆರಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಎನ್ ಡಿಎ ಜೊತೆಗೇ ಇದ್ದು ಕೇಂದ್ರದಲ್ಲಿ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. ಟಿಡಿಪಿ, ಜನಸೇನಾ, ಬಿಜೆಪಿ ಜೊತೆಯಾಗಿ ಸರ್ಕಾರ ರಚಿಸಲಿದೆ ಎಂದಿದ್ದಾರೆ.

ಇಂದು ಎನ್ ಡಿಎ ಸಭೆಯಲ್ಲಿ ನಾನು ಪವನ್ ಕಲ್ಯಾಣ್ ಭಾಗಿಯಾಗುತ್ತೇವೆ. ಚುನಾವಣೆಯಲ್ಲಿ ಮೂರೂ ಪಕ್ಷಗಳೂ ಒಟ್ಟಿಗೇ ಎದುರಿಸಿದ್ದೆವು. ಇದೀಗ ಕೇಂದ್ರದಲ್ಲಿ ಒಟ್ಟಿಗೇ ಸರ್ಕಾರ ರಚಿಸಲಿದ್ದೇವೆ. ದೆಹಲಿಯಲ್ಲಿ ನಡೆಯಲಿರುವ ಎನ್ ಡಿಎ ಸಭೆಯಲ್ಲಿ ನಾನು, ಪವನ್ ಕಲ್ಯಾಣ್ ಭಾಗಿಯಾಗಲಿದ್ದೇವೆ. ನಮ್ಮ ಮೈತ್ರಿಗೆ ಸಹಕಾರ ನೀಡಿದ ಮೋದಿ, ಅಮಿತ್ ಶಾಗೆ ಧನ್ಯವಾದಗಳು.  ಇದೊಂದು ಐತಿಹಾಸಿಕ ಗೆಲುವು. ಆಂಧ್ರಪ್ರದೇಶದಲ್ಲಿ ಮೈತ್ರಿಗೆ ಬುನಾದಿ ಹಾಕಿದ್ದೇ ಪವನ್ ಕಲ್ಯಾಣ್. ನಾವು ಎನ್ ಡಿಎ ಮೈತ್ರಿ ಕೂಟದ ಭಾಗ’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಇಂದು ಪ್ರಧಾನಿ ಮೋದಿ ಕೊನೆಯ ಕ್ಯಾಬಿನೆಟ್ ಸಭೆ ನಡೆಸಲಿದ್ದು, ಅದಾದ ಬಳಿಕ ಎನ್ ಡಿಎ ಮಿತ್ರ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ