ನವದೆಹಲಿ: ನಾಳೆ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಎನ್ ಡಿಎ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಈ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನನ್ನದು ಯಾವುದೇ ಡಿಮ್ಯಾಂಡ್ ಇಲ್ಲ ಎಂದಿದ್ದಾರೆ.
ಮೋದಿ ನೇತೃತ್ವದಲ್ಲಿ ರಚನೆಯಾಗಲಿರುವ ಹೊಸ ಎನ್ ಡಿಎ ಸರ್ಕಾರದ ಪಾಲುದಾರರಾಗಿರುವ ಟಿಡಿಪಿ ಮತ್ತು ಜೆಡಿಯು ನಾಯಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಈ ನಡುವೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನನ್ನದೇನೂ ಬೇಡಿಕೆಯಿಲ್ಲ ಎಂದಿದ್ದಾರೆ.
ಮೋದಿ ಕ್ಯಾಬಿನೆಟ್ ನಲ್ಲಿ ಯಾವುದೇ ಸ್ಥಾನ ನಮಗೆ ಬೇಡ, ನಾವು ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಕೇಂದ್ರ ಸಹಾಯ ಮಾಡಿದರೆ ಸಾಕು ಎಂದಿದ್ದಾರೆ. ಅಲ್ಲಿಗೆ, ಅವರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ಬೇಡಿಕೆಯಿಟ್ಟಿರುವುದು ಕನ್ ಫರ್ಮ್ ಆಗಿದೆ.
ಮೋದಿ ಯಾವ ಸ್ಥಾನ ಮಾನ ಕೊಟ್ಟರೂ ಖುಷಿಯಿಂದ ಸ್ವೀಕರಿಸುತ್ತೇವೆ. ಸದ್ಯಕ್ಕೆ ಕ್ಯಾಬಿನೆಟ್ ನಲ್ಲಿ ನಮಗೆ ಯಾವುದೇ ಬೇಡಿಕೆಯಿಲ್ಲ. ಆದರೆ ಹೊಸ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನುಕೂಲವಾದರೆ ಸಾಕು ಎಂದು ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.