ಕಳ್ಳನ ಎಟಿಎಂ ಕಾರ್ಡ್‌‌ನಿಂದ 2.5 ಲಕ್ಷ ಡ್ರಾ ಮಾಡಿದ ಮಹಿಳಾ ಪೊಲೀಸ್ ಇನ್ಸೆಪೆಕ್ಟರ್

ಶುಕ್ರವಾರ, 5 ಜುಲೈ 2019 (17:40 IST)
ಕಳ್ಳನಿಂದ ವಶಪಡಿಸಿಕೊಂಡ ಎರಡು ಎಟಿಎಂ ಕಾರ್ಡ್ ಬಳಿಸಿ 2.5 ಲಕ್ಷ ರೂಪಾಯಿ ಡ್ರಾ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ವರ್ಗಾವಣೆಯ ನಿರೀಕ್ಷೆಯಲ್ಲಿರುವ 2004 ಬ್ಯಾಚ್‌ನ ಮಹಿಳಾ ಪೊಲೀಸ್ ಇನ್ಸೆಪೆಕ್ಟರ್ ಆಗಿರುವ ಕಯಲ್‌ವಿಳಿ, ಚೆನ್ನೈನ ಸೆಂಟ್ರಲ್ ರೈಲ್ವೆ ಪೊಲೀಸ್ ಸ್ಟೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಇಂತಹ ಅಪರಾಧ ಎಸಗಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
 
 ಕಳ್ಳನಾಗಿದ್ದ 48 ವರ್ಷ ವಯಸ್ಸಿನ ಸಾಹುಲ್ ಹಮೀದ್, ಫಸ್ಟ್‌ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್‌ನ ಹವಾನಿಯಂತ್ರಿತ ಕೊಠಡಿಯಲ್ಲಿ ಪ್ರಯಾಣಿಸುತ್ತಿದ್ದ. ಸಹ ಪ್ರಯಾಣಿಕರ ಬ್ಯಾಗ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ. ಕಳ್ಳ ಸಾಹುಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ ಎನ್ನುವ ಪೊಲೀಸರಿಂದ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಆತನಲ್ಲಿದ್ದ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
 
ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕಳ್ಳನಿಂದ ವಶಪಡಿಸಿಕೊಂಡ ಕಳ್ಳತನದ ವಸ್ತುಗಳನ್ನು ಮತ್ತು 13 ಎಟಿಎಂ ಕಾರ್ಡ್‌ಗಳನ್ನು ಮಹಿಳಾ ಪೊಲೀಸ್ ಅಧಿಕಾರಿ ಕಯಲ್ ವಳಿ ನೀಡಿದ್ದಾರೆ. ಆದರೆ, ಎರಡು ಎಟಿಎಂ ಕಾರ್ಡ್‌ಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡಿದ್ದಾರೆ.
 
ಕಳ್ಳ ಸಾಹುಲ್‌ನ ಸಹೋದರಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಸಹೋದರ ಜೈಲಿನಲ್ಲಿದ್ದರೂ ಆತನ ಎಟಿಎಂ ಕಾರ್ಡ್‌ನಿಂದ ನಗರದ ವಿವಿಧ ಬ್ಯಾಂಕ್‌ಗಳಿಂದ 2.5 ಲಕ್ಷ ರೂಪಾಯಿ ಡ್ರಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾಳೆ.
 
ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದಾಗ ವೆಸ್ಟ್ ಮಾಂಬಲಂ ಪ್ರದೇಶದಲ್ಲಿರುವ ಎಟಿಎಂನಿಂದ ಮಹಿಳಾ ಪೊಲೀಸ್ ಅಧಿಕಾರಿ ಕಯಲ್‌ವಿಳಿ ಹಣ ವಿತ್‌ಡ್ರಾ ಮಾಡುತ್ತಿರುವುದು ಅಲ್ಲಿರುವ ಸಿಸಿಟಿವಿಯಿಂದ ಪತ್ತೆಯಾಗಿದೆ. ಕೂಡಲೇ ಮಹಿಳಾ ಪೊಲೀಸ್ ಇನ್ಸೆ‌ಪೆಕ್ಟರ್‌ ಕಯಲ್‌ವಿಳಿಯನ್ನು ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ