ಮಗು ರಕ್ಷಣೆ ವಿಡಿಯೋ ವೈರಲ್:‌ ಟ್ರೋಲ್‌ಗೆ ಮನನೊಂದು ತಾಯಿ ಆತ್ಮಹತ್ಯೆಗೆ ಶರಣು

sampriya

ಮಂಗಳವಾರ, 21 ಮೇ 2024 (16:11 IST)
Photo By X
ತಮಿಳುನಾಡು: ಚೆನ್ನೈನ ಅಪಾರ್ಟ್‌ಮೆಂಟ್‌ನ ಮೇಲ್ಚಾವಣಿಯ ಶೀಟ್‌ ಮೇಲೆ ನೇತಾಡುತ್ತಿದ್ದ ಎಂಟು ತಿಂಗಳ ಮಗುವನ್ನು ರಕ್ಷಿಸಿದ ಕೆಲ ದಿನಗಳ ನಂತರ ಮಗುವಿನ ತಾಯಿ ಟೀಕೆಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

33 ವರ್ಷದ ಶಿಶುವಿನ ತಾಯಿ,ತನ್ನ ಆಪಾದಿತ ನಿರ್ಲಕ್ಷ್ಯದ ಬಗ್ಗೆ ಟೀಕೆಗಳಿಂದ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆ ಕರಾಮಡೈನಲ್ಲಿರುವ ತನ್ನ ಪೋಷಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏ.೨೮ರಂದು ೮ ತಿಂಗಳ ಮಗುವೊಂದು ಚೆನ್ನೈನ ತಿರುಮುಲ್ಲೈವಾಯಲ್‌ನಲ್ಲಿ ಅಪಾರ್ಟ್‌ಮೆಂಟ್‌ನ ಮೇಲ್ಚಾವಣಿಯಲ್ಲಿ ಸಿಲುಕಿಕೊಂಡ ದೃಶ್ಯ ಹಾಗೂ ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಘಟನೆಯ ನಂತರ ಟೀಕೆಯ ಬಗ್ಗೆ ಮನನೊಂದಿದ್ದ ತಾಯಿ ತನ್ನ ತವರು ಮೇ 18 ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ತಕ್ಷಣ ಆಕೆಯ ಪೋಷಕರು ಆಸ್ಪತ್ರೆಗೆ ಸಾಗಿಸಿದರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ