2025ರ ಆವೃತ್ತಿಯಲ್ಲಿ ಮತ್ತೇ ಫೀಲ್ಡ್‌ಗೆ ಇಳಿಯುತ್ತಾರಾ ಧೋನಿ, ನಿವೃತ್ತಿ ಗುಟ್ಟು ಬಿಡದ ಮಹಿ

Sampriya

ಭಾನುವಾರ, 19 ಮೇ 2024 (17:29 IST)
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರು 2025ರ ಐಪಿಎಲ್ ಆವೃತ್ತಿಯಲ್ಲಿ ಆಡುತ್ತಾರಾ ಅಥವಾ ನಿನ್ನೆ ನಡೆದ ಪಂದ್ಯವೇ ವಿದಾಯ ಪಂದ್ಯವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5ಬಾರಿ ಐಪಿರಲ್ ಕಪ್ ಗೆದ್ದು ಕೊಟ್ಟಿದ್ದ  ನಾಯಕ ಧೋನಿ ಅವರು ಈ ಆವೃತ್ತಿಯಲ್ಲಿ ನಾಯಕತ್ವನ್ನು ಋತುರಾಜ್ ಗಾಯಕವಾಡ್ ಅವರಿಗೆ ಹಸ್ತಾಂತರಿಸಿದ್ದರು. ಅದರ ಬೆನ್ನಲ್ಲೇ 43 ವರ್ಷದ ವರ್ಷದ ಧೋನಿ ಅವರ ನಿವೃತ್ತಿ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಅವರು ಈ ಬಗ್ಗೆ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಐಪಿಎಲ್ 2024ರ ಆವೃತ್ತಿಯಲ್ಲಿ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋಲು ಅನುಭವಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಈ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಧೋನಿ ಅವರು ಮುಂದಿನ ಐಪಿಎಲ್‌ನಲ್ಲಿ ಕಣಕ್ಕಿಳಿಯದಿದ್ದರೆ ನಿನ್ನೆಯ ಪಂದ್ಯವೇ ಅವರಿಗೆ ಅಂತಿಮ ಪಂದ್ಯವಾಗಿದೆ.

ಇನ್ನೂ ಈ ಟೂರ್ನಿಯಲ್ಲಿ ಆಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ  ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ಖಂಡಿತವಾಗಿಯೂ ಹಳದಿ ಬಣ್ಣಕ್ಕೆ ಮರಳುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಇದೀಗ ಅಭಿಮಾನಿಗಳಲ್ಲಿ ಧೋನಿ ಮತ್ತೇ ಐಪಿಎಲ್ 2025 ರ ಟೂರ್ನಿಯಲ್ಲಿ ಆಡಲಿದ್ದಾರೆಂಬ ಪ್ರಶ್ನೆ ಎದ್ದಿದೆ.

ಜಿಯೋಸಿನಿಮಾ ಜೊತೆಗಿನ ಸಂವಾದದಲ್ಲಿ ಉತ್ತಪ್ಪ, "ನಾವು ಎಂಎಸ್‌ ಧೋನಿ ಅವರನ್ನು ಕೊನೆಯಾದಾಗಿ ನೋಡಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಈ ವಿಷಯಗಳನ್ನು ಲಘುವಾಗಿ ಪರಿಗಣಿಸುವವರಲ್ಲ. ಅವರು ಖಂಡಿತವಾಗಿಯೂ ಘರ್ಜಿಸುತ್ತಾ ಹಿಂತಿರುಗುತ್ತಾರೆ" ಎಂದು ಉತ್ತಪ್ಪ ಜಿಯೋಸಿನಿಮಾದಲ್ಲಿ ಮಾತನಾಡುತ್ತಾ ಹೇಳಿದರು.

ಎಂಎಸ್ ಧೋನಿ 2025 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಲು ಮರಳಲಿದ್ದಾರೆ ಎಂದು ಭಾರತದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಶನಿವಾರ ಹೇಳಿದರು.

ಮಾಜಿ ನಾಯಕ ಹೃದಯಾಘಾತ ಮತ್ತು ಹಿನ್ನಡೆಗಳನ್ನು ಲಘುವಾಗಿ ಪರಿಗಣಿಸುವ ವ್ಯಕ್ತಿಯಲ್ಲ ಎಂದು ಹೇಳಿದರು. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್‌ಕೆಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಕೊನೆಯ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿದ್ದಾಗ ಧೋನಿ 2024 ರ ಋತುವನ್ನು ಹೃದಯ ವಿದ್ರಾವಕ ಟಿಪ್ಪಣಿಯಲ್ಲಿ ಕೊನೆಗೊಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ