1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ: ಭಾರತವನ್ನ ಬೆದರಿಸಿದ ಚೀನಾ
ಬುಧವಾರ, 5 ಜುಲೈ 2017 (11:36 IST)
ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ನಾಚಿಕೆಗೇಡಿನ ವರ್ತನೆ ತೋರಿದೆ ಎಂದು ಆರೋಪಿಸಿರುವ ಚೀನಾದ ಭಾರತ ಮಿಲಿಟರಿ ಸಂಘರ್ಷಕ್ಕೆ ಪ್ರಚೋದಿಸಿದರೆ 1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿದೆ.
ಡೊಂಗ್ಲಾಂಗ್ ಪ್ರದೇಶವನ್ನ ಸೇನೆ ಜಮಾವಣೆ ಮೂಲಕ ತನ್ನ ಹತೋಟಿಗೆ ಪಡೆಯಲು ಭಾರತ ಯತ್ನಿಸಿರುವುದು ಭಾರತ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಕಾಣುತ್ತಿದೆ. ಭಾರತದ ಸೇನಾಬಲವನ್ನ ಚೀನಾ ಲಘುವಾಗಿ ಪರಿಗಣಿಸಿದೆ. ನಾವು 1962ರ ರೀತಿಯಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಜೇಟ್ಲಿ ಹೇಳಿದ್ದು ಸರಿ 1962ಕ್ಕಿಂತ ಭಾರತ 2017ರಲ್ಲಿ ವಿಭಿನ್ನವಾಗಿದೆ. ಮಿಲಿಟರಿ ಸಂಘರ್ಷನಡೆದರೆ 1962ಕ್ಕಿಂತಲೂ ಭಾರತ ಅಧಿಕ ನಷ್ಟ ಹೊಂದಲಿದೆ ಎಂದು ಪತ್ರಿಕೆ ಸಂಪಾದಕೀಯದಲ್ಲಿ ಬರೆಯಲಾಗಿದೆ. ಸಚಿವ ಅರುಣ್ ಜೇಟ್ಲಿ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗಳನ್ನ ಉಲ್ಲೇಖಿಸಿ ಚೀನಾ ಮಾಧ್ಯಮ ಬೆದರಿಕೆ ಒಡ್ಡಿದೆ.
`ಚೀನಾಗೆ ಸೇರಿದ ಡೊಂಗ್ಲಾಂಗ್ ಪ್ರದೇಶವನ್ನ ವಿವಾದಿತ ಪ್ರದೇಶವಾಗಿಸುವುದು ಮತ್ತು ಚೀನಾದ ರಸ್ತೆ ನಿರ್ಮಾಣ ಕಾರ್ಯವನ್ನ ತಡೆಯುವುದು ಭಾರತದ ಉದ್ದೇಶವಾಗಿದೆ.ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸಿಲಿಗುರು ಕಾರಿಡಾರ್ ಸಂಪರ್ಕ ಕಡಿತಗೊಳಿಸಲು ಚೀನಾ ರಸ್ತೆ ನಿರ್ಮಿಸುತ್ತಿದೆ ಎಂಬುದು ಭಾರತದ ಸಂಶಯವಾಗಿದೆ.ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. 20 ಭಾರತ, ಚೀನಾ ಮತ್ತು ಭೂತಾನ್ ಗಡಿಭಾಗಲ್ಲಿ ಪ್ರಕ್ಷುಬ್ದ ವಾತಾವರಣವಿದ್ದು, ಚೀನಾ ಸೇನೆಯ ರಸ್ತೆ ನಿರ್ಮಾಣ ಅಧಿಕಾರಿ ಭೇಟಿ ಕೊಟ್ಟ ಬಳಿ ಈ ಸಮಸ್ಯೆ ಆರಂಭವಾಗಿದೆ ಎಂದು ಉಲ್ಲೇಖಿಸಲಾಗಿದೆ.